ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಗೆ ಛಾಟಿ ಬೀಸಿದ ರೈತನ ಪುತ್ರ

ಶನಿವಾರ, 20 ಜುಲೈ 2019 (14:50 IST)
ಮೈತ್ರಿ ಪಕ್ಷಗಳು ಹಾಗೂ ಬಿಜೆಪಿ ಸದನದಲ್ಲಿ ನಡೆದುಕೊಳ್ಳುತ್ತಿರುವ ಪರಿ ನಾಡಿನ ಜನರಲ್ಲಿ ಹೇಸಿಗೆ ಹುಟ್ಟಿಸಿದೆ. ಈ ನಡುವೆ ರೈತನ ಪುತ್ರನೊಬ್ಬ ಮೂರು ಪಕ್ಷಗಳ ರಾಜಕೀಯ ಕುರಿತು ಬೇಸರ ವ್ಯಕ್ತಪಡಿಸಿ ಹರಿಬಿಟ್ಟಿರುವ ವಿಡಿಯೋ ವೈರಲ್ ಆಗಿದೆ.

ರಾಜ್ಯ ರಾಜಕೀಯ ಕುರಿತು ರೈತರಲ್ಲಿ ಬೇಸರವಾಗುತ್ತಿರುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ ಯುವಕ. ರಾಜ್ಯದ ಜನ ನಿಮ್ಮನ್ನು ನೋಡುತ್ತಿದ್ದಾರೆ ಎನ್ನುವುದನ್ನು ಮರೆತಿದ್ದೀರಾ? ದಯಮಾಡಿ, ಒಳ್ಳೆಯ ಕೆಲಸಗಳನ್ನು ಮಾಡಿ ಎಂದು ಮನವಿ ಮಾಡಿದ್ದಾನೆ ಸಂತೇಬಾಚಳ್ಳಿ ಹೋಬಳಿ ಯುವಕ.

ಮಂಡ್ಯ ಜಿಲ್ಲೆಯ ಸಂತೇಬಾಚಳ್ಳಿ ಹೋಬಳಿಯ ರೈತನ ಪುತ್ರ ಮಾಡಿರೋ ವಿಡಿಯೋ ಸದ್ದು ಮಾಡುತ್ತಿದೆ.  
ಸರ್ಕಾರದಿಂದ ರೈತರಿಗೆ ನಯಾಪೈಸೆ ಉಪಯೋಗವಿಲ್ಲ. ನಮ್ಮ ಹಣ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾನೆ ರೈತರ ಮಗ.  

ರೈತರಿಗೆ ಉಪಯೋಗವಾಗುವಂತೆ ಸರ್ಕಾರ ಮಾಡಿ ಎಂದು ಮನವಿ ಮಾಡಿದ್ದಾನೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶಿರೂರು ಮಠದ ಶ್ರೀಗಳ ಅಗಲಿಕೆಗೆ ಒಂದು ವರ್ಷ