Select Your Language

Notifications

webdunia
webdunia
webdunia
webdunia

ರಾಜ್ಯ ರಾಜಕೀಯದ ಡೊಂಬರಾಟಕ್ಕೆ ಕಿಡಿಕಾರಿದ ರೈತರು

ರಾಜ್ಯ ರಾಜಕೀಯದ ಡೊಂಬರಾಟಕ್ಕೆ ಕಿಡಿಕಾರಿದ ರೈತರು
ಬಳ್ಳಾರಿ , ಮಂಗಳವಾರ, 23 ಜುಲೈ 2019 (14:58 IST)
ಬಳ್ಳಾರಿ : ಕಳೆದ ಹಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ದೊಂಬರಾಟವನ್ನು ಕಂಡು ಬಳ್ಳಾರಿಯ ರೈತರು ಕಿಡಿಕಾರಿದ್ದಾರೆ.



ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ರೈತರು, ರಾಜ್ಯದಲ್ಲಿ ಮಳೆ ಇಲ್ಲದೆ, ಬೆಳೆಗೆ ನೀರಿಲ್ಲದೆ, ರೈತರು ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಇತ್ತ ಕಡೆ ಮೂರು ಪಕ್ಷಗಳು ವಿಧಾನಸೌಧದಲ್ಲಿ ಕಿತ್ತಾಡುತ್ತಾ ಕಾಲಹರಣ ಮಾಡುತ್ತಿವೆ. ರೈತರ ಸಮಸ್ಯೆಗೆ ಒಂದು ದಿನವೂ ಹೀಗೆ ಚರ್ಚೆ ನಡೆಸಲಿಲ್ಲ. ಶಾಸಕರನ್ನು 30-40-50 ಕೋಟಿ ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ. “ನಮ್ಮ ತೆರಿಗೆ ಹಣವನ್ನು ಕೊಳ್ಳೆ ಹೊಡೆಯಲು ರಾಜಕಾರಣ ಮಾಡೋದಾದರೆ ಯಾಕ್ರಿ ಬರ್ತೀರಾ? ಎಲ್ಲರು ರಾಜಿನಾಮೆ ಕೊಟ್ಟು ಮನೆಗೆ ಹೋಗ್ರಿ?” ಎಂದು ವಾಗ್ದಾಳಿ ನಡೆಸಿದ್ದಾರೆ.

 

ಮೂರು ಪಕ್ಷದವರು ಸೇರಿಕೊಂಡು ರಾಜ್ಯದ ಮಾನ ಹರಾಜು ಹಾಕುತ್ತಿದ್ದಾರೆ. ಸದನದಲ್ಲಿ ಮೋಡ ಬಿತ್ತನೆ ಬಗ್ಗೆ ಚರ್ಚೆ ಆಗಬೇಕಿದ್ದ ಸಮಯದಲ್ಲಿ ಹೈಡ್ರಾಮ ಆಡುತ್ತಿದ್ದಾರೆ. ರಾಜಕಾರಣಿಗಳು ಅಕ್ರಮವಾಗಿ ಆಸ್ತಿ ಸಂಪಾದಿಸಿ ಅದರ ರಕ್ಷಣೆಗಾಗಿ ಅವರಿಗೆ ಕುರ್ಚಿ ಅವಶ್ಯಕತೆ ಇದೆ. ಅವರ ಆಟಗಳನ್ನ ಕಾರ್ಟೂನ್ ರೀತಿ ಟಿವಿಯಲ್ಲಿ ನೋಡುವ ರೀತಿ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 


Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಿದ ಸುಪ್ರೀಂಕೋರ್ಟ್