Select Your Language

Notifications

webdunia
webdunia
webdunia
Sunday, 13 April 2025
webdunia

ಹೆತ್ತ ತಾಯಿಯೇ ಹೆಣ್ಣು ಮಗಳನ್ನು ಕೊಂದು ಕಥೆ ಹೆಣದಳಾ?

ಹೆಣ್ಣು ಮಗು
ಉಡುಪಿ , ಶನಿವಾರ, 13 ಜುಲೈ 2019 (18:04 IST)
ಹೆತ್ತ ತಾಯಿಯೇ ತನ್ನ ಹೆಣ್ಣು ಮಗುವನ್ನ ಕೊಂದು ಅದನ್ನು ಮುಸುಕುಧಾರಿಯೊಬ್ಬ ಅಪಹರಣ ಮಾಡಿ ಕೊಲೆ ಮಾಡಿದ್ದಾನೆ ಎಂದು ಕಥೆ ಕಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಸತ್ಯ ಬಯಲಿಗೆ ಎಳೆದಿದ್ದಾರೆ.

ಉಡುಪಿ ಯಡಮೊಗೆ ಗ್ರಾಮದಲ್ಲಿ ಹೊಳೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ಮೂಲಕ ತನ್ನ ಮಗುವಿನ ಸಾವಿಗೆ ಕಾರಣಳಾದ ತಾಯಿ ರೇಖಾ ನಾಯ್ಕ್ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ವಿಚಾರಣೆ ಸಂದರ್ಭದಲ್ಲಿ ರೇಖಾ ನಾಯ್ಕ್ ಗೆ ಮನೋವೈದ್ಯರಿಂದ ಆಪ್ತ ಸಮಾಲೋಚನೆ ನಡೆಸಲಾಗಿದ್ದು, ಆಕೆ ಖಿನ್ನತೆಗೆ ಒಳಗಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ರೇಖಾ ಗುಣಮುಖರಾದ ಬಳಿಕ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ರೇಖಾ ನೀಡಿರೋ ಹೇಳಿಕೆಯಂತೆ ಕೊಲೆ, ಕೊಲೆಯತ್ನ, ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿದೆ.



 


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಬಿಟ್ಟರೆ ಹುಷಾರ್ ಅಂದ್ರಾ ಯಡಿಯೂರಪ್ಪ?