ಬಿಜೆಪಿ ಬಿಟ್ಟರೆ ಹುಷಾರ್ ಅಂದ್ರಾ ಯಡಿಯೂರಪ್ಪ?

ಶನಿವಾರ, 13 ಜುಲೈ 2019 (17:21 IST)
ಮೈತ್ರಿ ಸರಕಾರದ ಶಾಸಕರು ರಾಜೀನಾಮೆ ನೀಡಿರೋ ಬೆನ್ನಲ್ಲೆ ಇದೀಗ ಕೆಲವು ಬಿಜೆಪಿ ಶಾಸಕರು ರಿವರ್ಸ್ ಆಪರೇಷನ್ ಗೆ ಒಳಗಾಗುತ್ತಿರುವ ಸುದ್ದಿ ಹರಿದಾಡುತ್ತಿರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಗರಂ ಆಗಿದ್ದಾರೆ.

ರಮಾಡ ರೆಸಾರ್ಟ್ ನಲ್ಲಿ ಬಿಜೆಪಿಯ ಎಲ್ಲ ಶಾಸಕರನ್ನು ಇರಿಸಲಾಗಿದೆ. ರಿವರ್ಸ್ ಆಪರೇಷನ್ ಭಯದಿಂದ ಬಿಜೆಪಿ ಶಾಸಕರು ರೆಸಾರ್ಟ್ ಸೇರಿಕೊಂಡಿದ್ದಾರೆ.

ಈ ನಡುವೆ ಬಿಜೆಪಿಗೆ ಕೈ ಕೊಡುತ್ತಾರೆ ಎನ್ನಲಾಗುತ್ತಿರುವ ಏಳು ಜನ ಶಾಸಕರಿಗೆ ಬಿ.ಎಸ್.ಯಡಿಯೂರಪ್ಪ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ನಿಮ್ಮ ಸಮಸ್ಯೆ ಅಥವಾ ಬೇಡಿಕೆ ಇದ್ದರೆ ತಿಳಿಸಿ. ಒಂದು ವೇಳೆ ಬಿಜೆಪಿ ಬಿಟ್ಟು ಹೋದರೆ ಹುಷಾರ್… ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ಎನ್ನಲಾಗುತ್ತಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೈತ್ರಿ ಸರಕಾರಕ್ಕೆ ಶಾಕ್: ವಿಪಕ್ಷ ಸಾಲಿನಲ್ಲಿ ಕೂಡ್ತೇವೆ ಎಂದ ಪಕ್ಷೇತರ ಶಾಸಕರು