Publish Date: Tue, 23 Jul 2019 (17:14 IST)
Updated Date: Tue, 23 Jul 2019 (17:16 IST)
ವಿಧಾನಸಭೆ ಕಲಾಪದಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ನಡೆದ ಚರ್ಚೆಯಲ್ಲಿಯೂ ಮಾಧ್ಯಮಗಳ ವಿರುದ್ಧ ಸಚಿವ ಹೆಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.
ದಿನಾ ಬೆಳಿಗ್ಗೆ ಎದ್ದು ಟಿವಿ ನೋಡಿದ್ರೆ ಅದರಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ರೇವಣ್ಣ ಅವರ ಹೆಸರನ್ನೇ ಟಿವಿಯವರು ಹೇಳುತ್ತಾರೆ.
ಅವರಿಂದಾಗಿಯೇ ಮತ್ತಷ್ಟು ಪಬ್ಲಿಸಿಟಿ ಸಿಕ್ಕಿದೆ. ಅದಕ್ಕಾಗಿ ಅಭಿನಂದನೆ ಸಲ್ಲಿಸೋದಾಗಿ ವ್ಯಂಗ್ಯವಾಡಿದ್ರು. ಜಾಹೀರಾತು ನೀಡದೇ ನಮ್ಮನ್ನು ನಿತ್ಯ ಟಿವಿಗಳಲ್ಲಿ ತೋರಿಸಲಾಗುತ್ತದೆ.
ಕುಮಾರಸ್ವಾಮಿ ಸರಕಾರ ಹೋಗೋವರೆಗೂ ಕೆಲವು ಟಿವಿಯವರು ಗಡ್ಡ ಬೋಳಿಸಿಕೊಳ್ಳಲ್ಲ ಅಂತ ಹೇಳಿದ್ರು. ಈಗಲಾದರೂ ಬೋಳಿಸಿಕೊಳ್ಳಲಿ ಎಂದು ಟೀಕೆ ಮಾಡಿದ್ರು.
ರಾಜ್ಯದ ಬಡಜನರ ಪರವಾಗಿ ಮಾಧ್ಯಮಗಳು ಕೆಲಸ ಮಾಡಬೇಕು. ಅದು ಬಿಟ್ಟು ದೇವೇಗೌಡರ ಕುಟುಂಬದವರ ವಿರುದ್ಧ ಕೆಲಸ ಮಾಡುತ್ತಿವೆ ಎಂದು ಹರಿಹಾಯ್ದರು.