Publish Date: Sun, 17 Nov 2019 (15:30 IST)
Updated Date: Sun, 17 Nov 2019 (15:32 IST)
ರಾಜ್ಯದಲ್ಲಿ ನಡೆಯುತ್ತಿರೋ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರನ್ನ ಸೋಲಿಸೋದೇ ನನ್ನ ಟಾರ್ಗೆಟ್ ಆಗಿದೆ ಅಂತ ಮಾಜಿ ಸಿಎಂ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರೋ ಸಿದ್ದರಾಮಯ್ಯ, ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಹೇಳಹೆಸರಿಲ್ಲದಂತೆ ಸೋಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ 12 ಮತಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಲಿದೆ ಅಂತ ಮಾಜಿ ಸಿಎಂ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಅನರ್ಹ ಶಾಸಕರು ನನ್ನನ್ನು ಟಾರ್ಗೆಟ್ ಮಾಡಿರೋದ್ರಿಂದ ನಾನೂ ಸಹ ಅವರನ್ನು ಸೋಲಿಸೋದನ್ನೇ ಗುರಿಯಾಗಿರಿಸಿಕೊಂಡಿದ್ದೇನೆ ಅಂತ ಸಿದ್ದರಾಮಯ್ಯ ತಿಳಿಸಿದ್ದಾರೆ.