Publish Date: Sun, 17 Nov 2019 (10:30 IST)
Updated Date: Sun, 17 Nov 2019 (10:32 IST)
ಹೊಸಕೋಟೆ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದ್ರೋಹಿ, ನಾನಲ್ಲ. ಕುರುಬ ಸಮುದಾಯಕ್ಕೆ, ನನಗೆ ಅವರು ದ್ರೋಹ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಬಾದಾಮಿ ಕ್ಷೇತ್ರದ ಎಲೆಕ್ಷನ್ ವೇಳೆ ನನ್ನ ಬಳಿ ಹಣ ಪಡೆದಿದ್ರು. ಚೆಕ್ ಮೂಲಕ ಪಡೆದ ಹಣವನ್ನು ಇನ್ನೂ ವಾಪಾಸ್ ನೀಡಿಲ್ಲ. ಸಿದ್ದರಾಮಯ್ಯ ಕಾಲದಲ್ಲಿ ಒಂದು ಮೆಡಿಕಲ್ ಕಾಲೇಜು ಕಟ್ಟಿಲ್ಲ. ಕಾಂಗ್ರೆಸ್ ಪಕ್ಷ ಕಟ್ಟಿದ್ದು ನಾವು, ಸಿದ್ದರಾಮಯ್ಯನಲ್ಲ. ಕೈಕಾಲು ಹಿಡಿದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು. ನಮ್ಮ ಹಣವನ್ನು ಹಾಕಿ ಸಿದ್ದರಾಮಯ್ಯರನ್ನು ಗೆಲ್ಲಿಸಿದ್ದೆವು. ಸಿದ್ದರಾಮಯ್ಯ ಎಲ್ಲ ಸಮುದಾಯಕ್ಕೆ ಮೋಸ ಮಾಡಿದ್ದಾರೆ ಎಂದು ಅವರು ತಮ್ಮ ಗುರು ಸಿದ್ದರಾಮಯ್ಯನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಗೇ ನನ್ನ ಸಹೋದರ ಪಿಳ್ಳಣ್ಣ ನನಗೆ ಇರುವೆ ಸಮಾನ. ಅವನು ಚಲಾವಣೆಯಾಗದ ನಾಣ್ಯ, ಅವನ ಬಗ್ಗೆ ಮಾತಾಡಲ್ಲ ಎಂದು ತನ್ನ ಸಹೋದರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.