Publish Date: Thu, 14 Nov 2019 (20:53 IST)
Updated Date: Thu, 14 Nov 2019 (20:55 IST)
ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲು ಮುಂದಾಗಿರೋ ಬಿ.ಸಿ.ಪಾಟೀಲ್ ಅವರು ಮಾಜಿ ಸಿಎಂ ವಿರುದ್ಧ ಕೆಂಡಕಾರಿದ್ದಾರೆ.
ಟಗರು ಖ್ಯಾತಿಯ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರೋ ಬಿ.ಸಿ.ಪಾಟೀಲ್, ರಾಜ್ಯದಲ್ಲಿಯೇ ಅತೀ ಹೆಚ್ಚು ಮತಗಳಿಂದ ಗೆದ್ದು ಬರುವೆ ಎಂದು ಸವಾಲ್ ಹಾಕಿದ್ದಾರೆ.
ಮಾಡೋಕೆ ಸಿದ್ದರಾಮಯ್ಯ ಹತ್ತಿರ ಕೆಲಸ ಇಲ್ಲ. ಹೀಗಾಗಿ ಟೀಕೆ ಮಾಡುತ್ತಾ ಕಾಲ ಹರಣ ಮಾಡುತ್ತಿದ್ದಾರೆ. ಜನರು ಸರಿಯಾದ ಸಮಯದಲ್ಲಿ ಪಾಠ ಕಲಿಸುತ್ತಾರೆ ಅಂತ ವ್ಯಂಗ್ಯವಾಡಿದ್ರು.
ಹಾವೇರಿಯ ರಟ್ಟಿಹಳ್ಳಿಯಲ್ಲಿ ಬಿ.ಸಿ.ಪಾಟೀಲ್ ಗೆ ಅದ್ದೂರಿ ಸ್ವಾಗತವನ್ನು ಮುಖಂಡರು ಕೋರಿದ್ರು.