Select Your Language

Notifications

webdunia
webdunia
webdunia
webdunia

ತಾಂಡಾ ಜನರಿಗೆ ಗುಡ್ ನ್ಯೂಸ್

ತಾಂಡಾ ಜನರಿಗೆ ಗುಡ್ ನ್ಯೂಸ್
ಕಲಬುರಗಿ , ಗುರುವಾರ, 14 ನವೆಂಬರ್ 2019 (20:26 IST)
ರಾಜ್ಯದಲ್ಲಿರುವ ತಾಂಡಾಗಳಿಗೆ ಸರಕಾರ ಶುಭ ಸುದ್ದಿ ನೀಡಿದೆ.

ರಾಜ್ಯದ 3300 ತಾಂಡಾಗಳು ಹಾಗೂ 5200 ದಾಖಲೆ ಇಲ್ಲದ ಜನವಸತಿ ಪ್ರದೇಶಗಳನ್ನು ಮುಂದಿನ 6 ತಿಂಗಳಲ್ಲಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ಅದರಂತೆ ನಿಗಮವು ಆಯಾ ಜಿಲ್ಲೆಯ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಹೇಳಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ನಿಟ್ಟಿನಲ್ಲಿ ಮೇಲ್ವಿಚಾರಣೆಗೆ ಕಂದಾಯ ಕೋಶ ತೆರೆಯಲಾಗಿದೆ ಎಂದು ವಿವರಿಸಿದರು.

ತಾಂಡಾಗಳ ಸಂಖ್ಯೆ ಹೆಚ್ಚಿರುವ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಿಂದಲೇ ಪ್ರಾಯೋಗಿಕವಾಗಿ 476 ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆಗೆ ನಿಗಮವು ಮುಂದಾಗಿದೆ. ಮುಂದಿನ 3 ತಿಂಗಳೊಳಗೆ ಈ ಕಾರ್ಯ ಸಾಧಿಸುವಂತೆ ಜಿಲ್ಲಾಡಳಿತ, ತಹಶೀಲ್ದಾರರು ಹಾಗೂ ಭೂ  ದಾಖಲೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಲೋಕಲ್ ಫೈಟ್ ನಲ್ಲಿ ಕಾಂಗ್ರೆಸ್ ಗೆ ಭಾರೀ ಗೆಲುವು