Publish Date: Sat, 16 Nov 2019 (14:36 IST)
Updated Date: Sat, 16 Nov 2019 (14:38 IST)
ಡಿಸಿಎಂ ಕ್ಷೇತ್ರದಲ್ಲಿ ಮಾಜಿ ಶಾಸಕರೊಬ್ಬರು ಬಂಡಾಯವೆದ್ದಿರೋದು ಡಿಸಿಎಂ ಹಾಗೂ ಬಿಜೆಪಿ ಟಿಕೆಟ್ ಪಡೆದಿರೋ ಅನರ್ಹ ಶಾಸಕರಿಗೆ ಶಾಕ್ ನೀಡಿದಂತಾಗಿದೆ.
ಅಥಣಿ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಜಟಾಪಟಿ ಮುಂದುವರಿದಿದ್ದರೆ, ಇತ್ತ ಮಾಜಿ ಶಾಸಕ ಕೈ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಮಾಜಿ ಶಾಸಕ ಶಹಜಾನ್ ಡೊಂಗರಗಾಂವ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮೊದಲು ಇಬ್ಬರು ಸೂಚಕರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದ ಶಹಜಹಾನ್ ಇಂದು ಮತ್ತೆ 11 ಜನ ಸೂಚಕರ ಜೊತೆಗೆ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದ್ದಾರೆ.
ಅಥಣಿ ನಗರದ ಸಿದ್ದೇಶ್ವರ ದೇಗುಲದಲ್ಲಿ ನಾಮಪತ್ರಕ್ಕೆ ಪೂಜೆ ಸಲ್ಲಿಸಿದ್ರು. ನೂರಕ್ಕು ಅಧಿಕ ಕಾರ್ಯಕರ್ತರ ಜೊತೆಗೆ ಬೈಕ್ ಮೂಲಕ ತೆರಳಿ ಚುನಾವಣಾಧಿಕಾರಿ ಜೆಲಾನಿ ಮೊಕಾಶಿಗೆ ನಾಮಪತ್ರ ಸಲ್ಲಿಕೆ ಮಾಡಿದ್ರು.
ನಂತ್ರ ಮಾತನಾಡಿದ ಶಹಜಹಾನ್ ಡೊಂಗರಾಂವ್, ನಾನು ಬಂಡಾಯವಾಗಿ ಕಣಕ್ಕೆ ಇಳಿಯುತ್ತಿಲ್ಲ. ನಮ್ಮ ಕಾರ್ಯಕರ್ತರು, ಬೆಂಬಲಿಗರ ಒತ್ತಾಯದ ಮೇರೆಗೆ ಕಣಕ್ಕೆ ಇಳಿಯುತ್ತಿದ್ದೇನೆ. ಪಕ್ಷ ಬಿ ಫಾರಂ ನೀಡುವ ವಿಶ್ವಾಸವಿದೆ. ಬಿ ಫಾರಂ ಸಿಗದೆ ಹೋದ್ರೆ, ಕಾರ್ಯಕರ್ತರು ಒಪ್ಪಿದರೇ ಸ್ವತಂತ್ರವಾಗಿ ಸ್ಪರ್ಧೆಗೆ ಇಳಿಯಲು ಸಿದ್ಧ ಎಂದ್ರು.