Publish Date: Sun, 17 Nov 2019 (11:10 IST)
Updated Date: Sun, 17 Nov 2019 (11:12 IST)
ಬೆಂಗಳೂರು : ಅನರ್ಹ ಶಾಸಕರನ್ನು ಮಂತ್ರಿ ಮಾಡುತ್ತೇನೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಅನರ್ಹರ ತ್ಯಾಗದಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ. ಹಾಗಾಗಿ ಅವರ ಪರ ಪ್ರಚಾರ ಮಾಡುತ್ತೆವೆ. ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ಎಂಟಿಬಿ ನಾಗರಾಜ್ ಪ್ರಾಮಾಣಿಕ ವ್ಯಕ್ತಿ. ನಾಳೆ ಹೊಸಕೋಟೆಯಲ್ಲಿ ಪ್ರಚಾರ ಪ್ರಾರಂಭಿಸಲಿದ್ದೇವೆ. ಶರತ್ ನೂರಕ್ಕೆ ನೂರು ಸೋಲ್ತಾರೆ. ಶರತ್ ನ್ನು ಪಕ್ಷದಿಂದ ಹೊರಹಾಕುತ್ತೇವೆ ಎಂದು ಅವರು ಹೇಳಿದ್ದಾರೆ.
ಹಾಗೇ ಚುನಾವಣಾ ಆಯೋಗಕ್ಕೆ ದೂರು ವಿಚಾರ ಬಗ್ಗೆ ಮಾತನಾಡಿದ ಸಿಎಂ, ಸಿದ್ದರಾಮಯ್ಯ ತಂಡಕ್ಕೆ ಬೇರೆ ಕೆಲಸ ಇಲ್ಲ. ದೂರುಗಳು ನೀಡೋದೆ ಕಾಂಗ್ರೆಸ್ ಕೆಲಸ, ಕಾಂಗ್ರೆಸ್ ದೂರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದಿದ್ದಾರೆ.