Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಅನಾಗರಿಕ; ಉಡಾಫೆ ಮಾತನಾಡೋ ವ್ಯಕ್ತಿ

ಸಿದ್ದರಾಮಯ್ಯ  ಅನಾಗರಿಕ; ಉಡಾಫೆ ಮಾತನಾಡೋ ವ್ಯಕ್ತಿ
ಚಾಮರಾಜನಗರ , ಬುಧವಾರ, 8 ಮೇ 2019 (21:24 IST)
ಮಾಜಿ ಸಿಎಂ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅನಾಗರಿಕ. ಉಡಾಫೆ ಮಾತನಾಡೋ ಮನುಷ್ಯ. ಹೀಗಂತ ಬಿಜೆಪಿ ಮುಖಂಡ ದೂರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕುರಿತು ಏಕ ವಚನದಲ್ಲಿ ನಿಂದಿಸಿರುವುದನ್ನ ಖಂಡಿಸಿರುವ  ಚಾಮರಾಜನಗರ ಲೋಕಸಭೆಯ ಬಿಜೆಪಿ ಅಭ್ಯರ್ಥಿ  ವಿ. ಶ್ರೀನಿವಾಸಪ್ರಸಾದ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಅನಾಗರೀಕ ಎಂದಿದ್ದಾರೆ.

ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಜಿ ಸಚಿವ ಶ್ರೀನಿವಾಸಪ್ರಸಾದ್ , ಸಿದ್ದರಾಮಯ್ಯ ಗೆ ಸಂಸ್ಕೃತಿ ಇಲ್ಲ, ನಾಗರೀಕತೆ ಇಲ್ಲ, ಆತ ಒಬ್ಬ ಉಡಾಫೆಯಾಗಿ ಮಾತನಾಡುವ ವ್ಯಕ್ತಿ‌. ದೇಶದ ಪ್ರಧಾನಿ  ಬಗ್ಗೆ ಏಕವಚನ ಬಳಸಿರುವುದು ಸರಿಯಲ್ಲ ಎಂದರು.

ಚಾಮುಂಡೇಶ್ವರಿಯಲ್ಲಿ  36 ಸಾವಿರ ಓಟುಗಳಲ್ಲಿ ಸೋತರೂ ಅವರಿಗೆ ನಾಚಿಕೆಯಾಗಿಲ್ಲ. ನಾನೇ ನಾನೇ ಎಂದು ಮೆರೆದ್ರು,  120 ರಿಂದ 78 ಕ್ಕೆ ತಮ್ಮ ಸ್ಥಾನ ಇಳಿದರೂ ಅವರಿಗೆ ನಾಚಿಕೆಯಾಗಲ್ವ ಎಂದರು. ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಗೊಂದಲದ ಗೂಡಾಗಿದೆ ಎಂದು  ಪ್ರಸಾದ್ ಹೇಳಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆ ಮಾಡಿದ್ದೇನು?