Publish Date: Wed, 08 May 2019 (20:31 IST)
Updated Date: Wed, 08 May 2019 (20:33 IST)
ಕುಡಿದ ಮತ್ತಿನಲ್ಲಿ ಯುವಕರಿಬ್ಬರಿಗೆ ಪೊಲೀಸ್ ಪೇದೆಯಿಂದ ಹಲ್ಲೆ ನಡೆದಿದೆ.
ಹಾಸನದ ಜಿಲ್ಲೆಯ ಚನ್ನಾಯಪಟ್ಟಣ ತಾಲೂಕಿನ ಹೀರಿಸಾವೆಯಲ್ಲಿ ಘಟನೆ ನಡೆದಿದೆ.
ಹಿರೀಸಾವೆ ಪೊಲೀಸ್ ಠಾಣೆಯ ಪೇದೆ ನಾಗೇಶ್ ಎಂಬುವವರಿಂದ ಯುವಕರ ಮೇಲೆ ಹಲ್ಲೆ ನಡೆದಿದೆ.
ಗುರು ಮತ್ತು ರಕ್ಷಿತ್ ಎಂಬ ಯುವಕರ ಮೇಲೆ ಕುಡುಕ ಪೇದೆಯಿಂದ ಹಲ್ಲೆ ನಡೆದಿದೆ.
ರಾತ್ರಿ 12.30 ರ ವೇಳೆ ಬಸ್ ಗೆ ಕಾಯುತ್ತಿದ್ದ ಪ್ರೀತಿ ಫ್ಯಾಷನ್ ಅಂಗಡಿ ಯುವಕರಿಗೆ ಸುಖಾ ಸುಮ್ಮನೆ ಹಲ್ಲೆ ನಡೆಸಲಾಗಿದೆ.
ಅಂಗಡಿಯಲ್ಲಿ ಮಲಗಿ ಬಸ್ ಗೆ ಹೋಗುವಾಗ ದರ್ಪ ತೋರಿದ್ದಾನೆ ಪೊಲೀಸ್ ಪೇದೆ.
ಹಲ್ಲೆಯ ದೃಶ್ಯ ಸಿಸಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
ಕುಡುಕ ಪೇದೆ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಪೇದೆ ಮೇಲೆ ಕ್ರಮಕ್ಕೆ ಆಗ್ರಹ ಮಾಡಲಾಗಿದೆ.
ಕಳೆದ ವಾರ ಚನ್ನರಾಯಪಟ್ಟಣ ಎಎಸ್ ಐ ಬಟ್ಟೆ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿ ಅಮಾನತ್ತಾಗಿದ್ದರು.