Publish Date: Mon, 29 Apr 2019 (12:53 IST)
Updated Date: Mon, 29 Apr 2019 (12:55 IST)
ಕುಡಿದು ರಸ್ತೆಯ ಮೆಲೆ ಜಗಳವಾಡುತ್ತಿದ್ದವರನ್ನು ಬಿಡಿಸಲಿಕ್ಕೆ ಹೋದ ಪೊಲೀಸ್ ಪೇದೆಗೆ ಕುಡುಕರೇ ಥಳಿಸಿರುವ ಘಟನೆ ನಡೆದಿದೆ.
ಪೇದೆಗೆ ಕುಡುಕರು ಥಳಿಸಿದ್ದಾರೆ.
ಕುಡುಕರ ನಡುವಿನ ಜಗಳ ಬಿಡಿಸಲಿಕ್ಕೆ ಮುಂದಾಗಿದ್ದರು ಪೇದೆ. ಆದರೆ ಪೇದೆ ಎನ್ನೋದನ್ನು ನೋಡದೇ ಕುಡುಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣೆ ಎದುರು ನಡೆದ ಘಟನೆ ಇದಾಗಿದೆ. ಕುಡುಕರಿಬ್ಬರು ಸೇರಿ ಪೊಲೀಸ್ ಪೇದೆ ಎಲ್. ಎಚ್. ನಾಯ್ಕರನಿಗೆ ಥಳಿಸಿದ್ದಾರೆ.
ಆಕ್ರೋಶಗೊಂಡ ಸಾರ್ವಜನಿಕರು ಕುಡಿಕರಿಬ್ಬರಿಗೆ ಥಳಿಸಿ ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ. ಕಿತ್ತೂರು ತಾಲೂಕಿನ ಗುಡಿ ಕೊಟಬಾಗಿ ಗ್ರಾಮದ ಇಬ್ಬರು ಯುವಕರು ಇವರಾಗಿದ್ದಾರೆ.