Publish Date: Mon, 04 Mar 2019 (10:18 IST)
Updated Date: Mon, 04 Mar 2019 (10:19 IST)
ಬೆಂಗಳೂರು : ತುಂಡುಡುಗೆ ಧರಿಸಿದ ಯುವತಿಯೊಬ್ಬಳಿಗೆ ಪೊಲೀಸ್ ಪೇದೆಗಳಿಬ್ಬರು ನಿಂದಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಸಮೀಪವಿರುವ ಲಸ್ಸಿ ಶಾಪ್ ನಲ್ಲಿ ಯುವತಿ ಕುಳಿತಿದ್ದ ವೇಳೆ ಅಲ್ಲಿಗೆ ಬಂದ ಇಬ್ಬರು ಪೇದೆಗಳು, ತುಂಡು ಬಟ್ಟೆ ಹಾಕಿಕೊಂಡು ರಸ್ತೆಗೆ ಬಂದಿದ್ದಿಯಲ್ಲ. ನಿನಗೆ ನಾಚಿಕೆಯಾಗುವುದಿಲ್ಲವೇ. ನಿಮ್ಮನ್ನು ಕಾಯುವುದೇ ನಮಗೆ ಕೆಲಸವಾ ಎಂದು ಕೇಳಿದ್ದರು.
ಇದರಿಂದ ತೀವ್ರ ಮುಜುಗರಕ್ಕೊಳಗಾದ ಯುವತಿ ಈ ವಿಚಾರವನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ. ಯುವತಿಯ ಪೋಸ್ಟ್ ವೈರಲ್ ಆದ ಹಿನ್ನಲೆಯಲ್ಲಿ ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು, ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.