Publish Date: Tue, 07 May 2019 (21:00 IST)
Updated Date: Tue, 07 May 2019 (21:02 IST)
ರಾಜ್ಯದ ಸಮ್ಮಿಶ್ರ ನಾಲ್ಕು ವರ್ಷ ಪೂರೈಸಲಿದೆ. ನಾವು ಈಗಾಗಲೇ ಜೆಡಿಎಸ್ ಗೆ ಬೇಷರತ್ ಬೆಂಬಲ ಕೊಟ್ಟಿದ್ದೇವೆ.
ಅದರಂತೆ ನಾಲ್ಕು ವರ್ಷಗಳ ಕಾಲ ಕುಮಾರಸ್ವಾಮಿಯೇ ಸಿಎಂ ಆಗಿರ್ತಾರೆ ಅಂತ ಗೃಹ ಸಚಿವ ಹೇಳಿದ್ದಾರೆ.
ಅಧಿಕಾರ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಒಂದು ವೇಳೆ ಈ ರೀತಿ ವಿಷಯ ಬಂದ್ರೆ ದೇವೇಗೌಡರು, ರಾಹುಲ್ ಗಾಂಧಿ ಚರ್ಚಿಸಿ ತೀರ್ಮಾನ ಕೈಗೊಳ್ತಾರೆ. ಆದರೆ ಇದುವರೆಗೂ ಅಧಿಕಾರ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದ್ರು.
ಸಿಎಂ ಆಗಬೇಕು ಎಂದು ನನಗೂ ಆಸೆ ಇದೆ ಎಂದ ಗೃಹ ಸಚಿವ ಎಂ.ಬಿ.ಪಾಟೀಲ್, ಆದರೆ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಎಂದೂ ಹೇಳಿದ್ರು.
ಈ ಮೈತ್ರಿ ಸರ್ಕಾರ ಅವಧಿ ಮುಗಿದ ಬಳಿಕ ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ. ಅವಾಗ ನೋಡೋಣ ಸಿದ್ದರಾಮಯ್ಯ ಅವಾಗ ಸಿಎಂ ಆಗಬಹುದು ಎಂದ್ರು ಎಂಬಿಪಿ.