Select Your Language

Notifications

webdunia
webdunia
webdunia
webdunia

ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಚಾಲಕ ಮಾಡಿದ್ದೇನು?

ಸಾರಿಗೆ ಇಲಾಖೆ
ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಚಾಲಕನೊಬ್ಬ ಸರಿಯಾದ ಕೆಲಸ ಮಾಡಿದ್ದಲ್ಲದೇ ಅಧಿಕಾರಿಯ ಬೆವರಿಳಿಸಿದ್ದಾನೆ.

ಕೆ.ಎಸ್.ಆರ್.ಟಿ.ಸಿ ಚಾಲಕ, ನಿರ್ವಾಹಕರುಗಳಿಗೆ ಕಿರುಕುಳ ನೀಡೋದು ಆಗಾಗ್ಗೆ ಹೊರಬರುತ್ತಲೇ ಇದೆ. ಕಿರುಕುಳ ನೀಡುತ್ತಿದ್ದ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಸಾರಿಗೆ ಇಲಾಖೆ ಡ್ರೈವರ್, ಕಂಡಕ್ಟರ್ ಗಳು.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಸ್ ಡಿಪೋದಲ್ಲಿ ಘಟನೆ ನಡೆದಿದೆ.

ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ನಿರ್ವಾಹಕ, ಚಾಲಕರು ಕಿಡಿಕಾರಿದ್ದಾರೆ.

ಎ.ಟಿ.ಎಸ್ ಕಳಸದ ಎಂಬ ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ರಜೆ, ಡ್ಯೂಟಿ ಹಾಕುವ ವಿಷಯದಲ್ಲಿ ನಿತ್ಯ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಲಾಗಿದೆ. ಡಿಪೋ ಮ್ಯಾನೇಜರ್ ಶಶಾಂಕ್ ನಾಯಕ್, ಎಟಿಎಸ್ ಕಳಸದ ಎಂಬ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಧಿಕಾರಿಗೆ ಚಾಲಕ, ಕಂಡಕ್ಟರ್ ಗಳು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಫುಲ್ ವೈರಲ್ ಆಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆ ವೇಷ ಹಾಕಿ ಶಾಸ್ತ್ರ ಮಾಡಿ ಆ ಕೆಲಸ ಮಾಡಿದ್ರು!