Select Your Language

Notifications

webdunia
webdunia
webdunia
webdunia

ಕೇರಳ ಜನರು ಮಾಡ್ತಿದ್ದಾರೆ ಇಂಥ ಅಸಹ್ಯ ಕೆಲಸ

ಕೇರಳ ಜನರು ಮಾಡ್ತಿದ್ದಾರೆ ಇಂಥ ಅಸಹ್ಯ ಕೆಲಸ
ಮೈಸೂರು , ಮಂಗಳವಾರ, 30 ಏಪ್ರಿಲ್ 2019 (18:13 IST)
ಕೇರಳದ ಜನರು ರಾಜ್ಯದ ಜನರೊಂದಿಗೆ ಅಸಹ್ಯ ಕೆಲಸ ಮಾಡುತ್ತಿದ್ದಾರೆ. ಬೇಡ ಎಂದರೂ ಮತ್ತೆ ತಮ್ಮ ಕೆಲಸ ಮುಂದುವರಿಸಿದ್ದಾರೆ. ಇದು ರಾಜ್ಯದ ಜನರನ್ನು ರೊಚ್ಚಿಗೆಬ್ಬಿಸಿದೆ.

ಕೇರಳಿಗರು ರಾತ್ರೋರಾತ್ರಿ ಲಾರಿಗಟ್ಟಲೆ ಕಸದರಾಶಿ ತಂದು ಕರ್ನಾಟಕದ ಗಡಿ ಭಾಗದಲ್ಲಿ ಸುರಿಯುತ್ತಿದ್ದಾರೆ.  ಕೇರಳದ ತ್ಯಾಜ್ಯವನ್ನು ನಮ್ಮಲ್ಲಿ ಸುರಿಯುವ ಜನರಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಧ್ಯರಾತ್ರಿ ಲಾರಿಗಳ ಮೂಲಕ ಗ್ರಾಮಗಳಿಗೆ ತಂದು ಕಸ ಸುರಿಯುತ್ತಿರುವ ಕಿರಾತಕರು ಪರಾರಿಯಾಗುತ್ತಿದ್ದಾರೆ.
ಕಸದ ಲಾರಿಗಳನ್ನು ತಡೆದ ಜನರನ್ನು ಹೊರಗಟ್ಟಿ ಲಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಪೊಲೀಸರು ಅಂತ ಜನರು ದೂರುತ್ತಿದ್ದಾರೆ.
ಮೈಸೂರು ಜಿಲ್ಲೆ ನರಸೀಪುರ ತಾಲೂಕಿನ ಕಗ್ಗಲೀಪುರದಲ್ಲಿ ಘಟನೆ ನಡೆದಿದೆ. ಕಗ್ಗಲೀಪುರದ ಕೆರೆ ಪಕ್ಕದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಕಸ ಸುರಿದಿದ್ದಾರೆ ಕೇರಳದ ಮಂದಿ.

ಪರಿಸರಕ್ಕೆ ವಿಷವಾಗುವ ಪ್ಲಾಸ್ಟಿಕ್ಕನ್ನು ರಾಜ್ಯದೊಳಕ್ಕೆ ತರಲು ಅವಕಾಶ ಮಾಡಿಕೊಟ್ಟಿರುವ ಅಧಿಕಾರಿಗಳ ಕ್ರಮಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.

ಅಧಿಕಾರಿಗಳ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಗ್ರಾಮಸ್ಥರು. ಪೊಲೀಸರು ಹಾಗೂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ ನಡೆಯುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಹಡಿ ಮೇಲೆ ಮಲಗಿದ್ರೆ ಹುಷಾರ್; ರಾತ್ರಿ ಆಗಬಾರದ್ದು ಆಗುತ್ತೆ!