Publish Date: Mon, 29 Apr 2019 (08:50 IST)
Updated Date: Mon, 29 Apr 2019 (08:52 IST)
ನವದೆಹಲಿ: ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಚಾರದ ನಡುವೆ ರೈತರಿಗೆ ಬೆಂಕಿ ನಂದಿಸಲು ಸಹಾಯ ಮಾಡಿದ್ದಾರೆ.
ಪ್ರಚಾರಕ್ಕೆ ಹೋಗಿದ್ದ ಸ್ಮೃತಿ ಇರಾನಿ ಸ್ಥಳೀಯ ಗದ್ದೆಗಳಲ್ಲಿ ಹತ್ತಿಕೊಂಡಿದ್ದ ಬೆಂಕಿ ನಂದಿಸಲು ಸ್ವತಃ ತಾವೇ ಹ್ಯಾಂಡ್ ಪಂಪ್ ಮೂಲಕ ಬಕೆಟ್ ಗಳಲ್ಲಿ ನೀರು ತುಂಬಿ ಬೆಂಕಿ ನಂದಿಸಲು ಕೈ ಜೋಡಿಸಿದ್ದಾರೆ.
ಸಚಿವೆಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಚಾರಕ್ಕೆಂದು ಹೊರಟಿದ್ದ ಸ್ಮೃತಿ ಇರಾನಿಗೆ ಬಿಜೆಪಿ ಕಾರ್ಯಕರ್ತರು ಬೆಂಕಿ ಹತ್ತಿಕೊಂಡ ಸುದ್ದಿ ತಿಳಿಸಿದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ