Select Your Language

Notifications

webdunia
webdunia
webdunia
webdunia

ಉಮೇಶ್ ಜಾಧವ್ ವಿರುದ್ಧ ಮೈತ್ರಿ ಅಭ್ಯರ್ಥಿ ಕಿಡಿ

ಜಾಧವ
ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಉಮೇಶ್ ಜಾಧವ ವಿರುದ್ಧ ಬೈ ಎಲೆಕ್ಷನ್ ನ ಕೈ ಅಭ್ಯರ್ಥಿ ಕಿಡಿಕಾರಿದ್ದಾರೆ.


ಬಿ ಫಾರಂ ಪಡೆದ ಬಳಿಕ ಚಿಂಚೋಳಿ ಕ್ಷೇತ್ರದ ಮೈತ್ರಿ ಅಭ್ಯರ್ಥಿ‌ ಸುಭಾಷ್ ರಾಥೋಡ್ ಹೇಳಿಕೆ ನೀಡಿದ್ದು, ನನಗೆ ಟಿಕೆಟ್ ಕೊಟ್ಟಿದ್ದು ಸಂತೋಷ ಆಗಿದೆ. ನಮ್ಮ ನಾಯಕರು ಭರವಸೆ ಇಟ್ಟು ಟಿಕೆಟ್ ಕೊಟ್ಟಿದ್ದಾರೆ.

ಉಮೇಶ್ ಜಾಧವ್ ಯಾವಾಗಲೂ ದ್ವಂದ್ವ ನೀತಿ ಅನುಸರಿಸೋರು. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಉಮೇಶ್ ಜಾಧವ್ ಪುತ್ರ ವ್ಯಾಮೋಹ ಅಂತ ಆರೋಪಿಸಿದ್ರು. ಈಗ ಉಮೇಶ್ ಜಾಧವ್ ಏನ್ ಮಾಡಿದ್ರು? ಎಂದು ಪ್ರಶ್ನೆ ಮಾಡಿದ್ರು.

ಬಿಜೆಪಿ ಟಿಕೆಟ್ ಅನ್ನು ತಮ್ಮ‌ ಪುತ್ರನಿಗೆ ಉಮೇಶ್ ಜಾಧವ್ ಕೊಡಿಸಿದ್ದಾರೆ. ನಿಜವಾದ ಪುತ್ರ ವ್ಯಾಮೋಹ ಉಮೇಶ್ ಜಾಧವ್ ಗೆ ಇದೆ. ಜನ ಚುನಾವಣೆಯಲ್ಲಿ ಅವರಿಗೆ ತಕ್ಕ ಉತ್ತರ ಕೊಡ್ತಾರೆ ಅಂತೆಲ್ಲ ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಮಾಧ್ಯಮಗಳ ಸಿಎಂ ಗರಂ: ಮಜಾ ಮಾಡಿ ಎಂದ ಕುಮಾರಸ್ವಾಮಿ