Publish Date: Sat, 27 Apr 2019 (13:08 IST)
Updated Date: Sat, 27 Apr 2019 (13:10 IST)
ಬಿಜೆಪಿ ರಾಜ್ಯಾಧ್ಯಕ್ಷರು ಭವಿಷ್ಯ ನುಡಿದಿದ್ದು, ಲೋಕಸಭೆ ಚುನಾವಣೆಯ ಫಲಿತಾಂಶ ಬಿಜೆಪಿ ಪರ ಬರಲಿದ್ದು, ಘಟನಾನುಘಟಿ ಕಾಂಗ್ರೆಸ್, ಜೆಡಿಎಸ್ ನಾಯಕರು ಸೋಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದು, ಕೆ.ಹೆಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಸೋಲಲಿದ್ದಾರೆ. ಹೆಚ್.ಡಿ. ದೇವೇಗೌಡರು ಸೋತರೂ ಆಶ್ಚರ್ಯ ಪಡಬೇಕಿಲ್ಲ ಎಂದರು.
ಮಾಧ್ಯಮಕ್ಕೋಸ್ಕರ ಮತ್ತು ಮಾಧ್ಯಮವರನ್ನು ತೃಪ್ತಿಪಡಿಸಲು ಇದನ್ನು ಹೇಳುತ್ತಿಲ್ಲ ಎಂದ ಅವರು, ಕಾಂಗ್ರೆಸ್, ಜೆಡಿಎಸ್ ಘಟಾನುಘಟಿಗಳು ಹಿನ್ನಡೆ ಅನುಭವಿಸುವುದು ನಿಶ್ಚಿತ. ಈಗಾಗಲೇ ರಾಜಕೀಯ ಗೊಂದಲಗಳು ಶುರುವಾಗಿವೆ. ಕಾಂಗ್ರೆಸ್, ಜೆಡಿಎಸ್ ನಲ್ಲಿ ಗೊಂದಲ ಶುರುವಾಗಿದೆ. ಫಲಿತಾಂಶದ ಬಳಿಕ ಅದು ಉಲ್ಬಣವಾಗಲಿದೆ ಎಂದು ಯಡಿಯೂರಪ್ಪ ಹೇಳಿದ್ರು.