ದೇವೇಗೌಡ್ರು ಗೆದ್ದರೆ ಪರಮೇಶ್ವರ್ ಸಿಎಂ: ಆಡಿಯೋ ವೈರಲ್

ಶುಕ್ರವಾರ, 26 ಏಪ್ರಿಲ್ 2019 (15:39 IST)
ತುಮಕೂರಿನಲ್ಲಿ ಹೆಚ್.ಡಿ. ದೇವೇಗೌಡ್ರು ಗೆದ್ದರೆ ಪರಮೇಶ್ವರ್ ಸಿಎಂ ಆಗುತ್ತಾರೆ. ಹೀಗಂತ ಕೈ ಪಾಳೆಯದ ನಾಯಕರು ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

ದೇವೇಗೌಡರು ಗೆದ್ದಲ್ಲಿ ಮೈತ್ರಿ ಪಕ್ಷದ ಬಂಡಾಯ ಅಭ್ಯರ್ಥಿಗಳಿಗೆ ತಲಾ 3.5 ಕೋಟಿ ದೊರಕಲಿದೆ. ಕೆ. ಎನ್. ರಾಜಣ್ಣ, ಮುದ್ದಹನುಮೇಗೌಡ ತಲಾ 3.5 ಕೋಟಿ ಪಡೆದಿದ್ದಾರೆ ಎಂಬ ಚರ್ಚೆ ನಡೆದಿದೆ. ಮುದ್ದಹನುಮೇಗೌಡ 172 ಅಧಿಕಾರಿಗಳ ಟ್ರಾನ್ಪರ್ ಮಾಡಿಸಿಕೊಂಡಿದ್ದಾರೆ. ಹೀಗಂತ ಮಾತನಾಡಿರುವ ಆಡಿಯೋ ತುಮಕೂರು ಜಿಲ್ಲೆಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಕಾರ್ಯಕರ್ತರಿಬ್ಬರು ದೂರವಾಣಿಯಲ್ಲಿ ಸಂಭಾಷಣೆ ನಡೆಸಿರುವ ಆಡಿಯೋ ಇದಾಗಿದೆ. ಕಾಂಗ್ರೆಸ್ ನ ಸಾಮಾಜಿಕ ಜಾಲಾ ತಾಣ ಉಸ್ತುವಾರಿ ಕಾರ್ಯಕರ್ತ ದರ್ಶನ್ ಹಾಗೂ ನೃಪತುಂಗ ಎನ್ನುವ ಕಾರ್ಯಕರ್ತನ ನಡುವೆ ಈ ಚರ್ಚೆ ನಡೆದಿದೆ.

ಈ ಇಬ್ಬರು ಡಿಸಿಎಂ ಪರಮೇಶ್ವರ್ ಜೊತೆ ಗುರುತಿಸಿಕೊಂಡಿರುವವರಾಗಿದ್ದಾರೆ. ಸಾಮಾಜಿಕ ಜಾಲಾ ತಾಣಗಳಲ್ಲಿ ಆಡಿಯೋ ವೈರಲ್ ಆಗಿದೆ.
ಮೊನ್ನೆಯಷ್ಟೇ ರಮೇಶ್ ಜಾರಕಿಹೊಳಿ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿ ಗೂಸ ತಿಂದಿದ್ದನು ದರ್ಶನ್.

ಆಡಿಯೋ ವೈರಲ್ ಆಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಾರೆ ಕಾರ್ಯಕರ್ತರು. ಆದರೆ ನೃಪತುಂಗಾ, ದರ್ಶನ್ ಗೆ ರೆಬೆಲ್ ನಾಯಕರ ಬೆಂಬಲಿಗರಿಂದ ಹುಡುಕಾಟ ನಡೆದಿದೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಎಲ್ಲರೂ ಇದ್ದಾಗಲೇ ಚಿನ್ನಾಭರಣ ಕಳವು: ಮನೆ ಮಂದಿಗೆ ಶಾಕ್