Publish Date: Sat, 27 Apr 2019 (13:15 IST)
Updated Date: Sat, 27 Apr 2019 (13:17 IST)
ರಾಜ್ಯದಲ್ಲಿ ಉಪಚುನಾವಣೆಗಳು ಸಮೀಪಿಸುತ್ತಿರುವಂತೆ ಬಿಜೆಪಿ ಕಣ್ಣು ಹನಿಮೂನ್ , ಪ್ರವಾಸದ ಮೇಲೆ ಬಿದ್ದಿದೆ.
ಚಿಂಚೋಳಿ, ಕುಂದಗೋಳ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಸಧ್ಯ ಈಗ ಎರಡು ಉಪ ಚುನಾವಣೆಗಳು ಬಂದಿವೆ. ಕುಂದಗೋಳ್, ಚಿಂಚೋಳಿಯಲ್ಲಿ ನಾವು ಗೆಲ್ಲಲೇಬೇಕು. ಹೀಗಂತ ಬಿಜೆಪಿ ನಿರ್ಧಾರ ಮಾಡಿದೆ.
ಅಭ್ಯರ್ಥಿಗಳ ಗೆಲುವಿಗಾಗಿ ಬಿಜೆಪಿ ಮುಖಂಡರು ಶಕ್ತಿ ಮೀರಿ ಶ್ರಮಿಸಬೇಕಿದೆ. ಹೀಗಾಗಿ ಹೊರ ದೇಶ ಪ್ರವಾಸ, ಹನಿಮೂನ್ ಮತ್ತೊಂದು ಏನೇ ಇದ್ದರೂ ಉಪ ಚುನಾವಣೆ ನಂತರ ಹೋಗಿ. ಮೇ.23 ರ ನಂತರ ಎಲ್ಲಿ ಬೇಕಾದರೂ ಹೋಗಿ. ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಖಡಕ್ ಸೂಚನೆ ನೀಡಿದ್ದಾರೆ.
ಉಪ ಚುನಾವಣೆವರೆಗೆ ಯಾರಿಗೂ ವಿಶ್ರಾಂತಿ ಇಲ್ಲ, ಅಭ್ಯರ್ಥಿ ಗೆಲ್ಲಿಸಿ ಎಂದು ಬಿಎಸ್ವೈ ಮನವಿ ಮಾಡಿದ್ದಾರೆ.
ಎರಡೂ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಬೂತ್ ಮಟ್ಟಗಳಿಗೆ ಹೋಗಿ ಬಿಜೆಪಿ ಪರ ಪ್ರಚಾರ ಮಾಡಿ ಅಂತಾನೂ ಯಡಿಯೂರಪ್ಪ ಹೇಳಿದ್ದಾರೆ.