Publish Date: Mon, 06 May 2019 (16:02 IST)
Updated Date: Mon, 06 May 2019 (16:03 IST)
ಪುರುಷನೊಬ್ಬ ಮಹಿಳೆ ವೇಷ ಹಾಕಿ ಶಾಸ್ತ್ರ ಮಾಡಿಸಿಕೊಂಡು ಆ ಕೆಲಸ ಮಾಡಿದ್ದಾರೆ.
ಹಳೆಯ ಸಂಸ್ಕೃತಿ, ಆಚರಣೆಗಳನ್ನು ಜನರು ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ. ಪುರುಷನೊಬ್ಬ ಮಹಿಳೆ ವೇಷ ಹಾಕಿ ಶಾಸ್ತ್ರ ಮಾಡಿಸಿಕೊಂಡು ಆ ಕೆಲಸ ಮಾಡಿದ್ದಾರೆ.
ಬಿಸಿಲ ಬೇಗೆಗೆ ತತ್ತರಿಸಿದ ಹಾಸನ ಜಿಲ್ಲೆಯ ಜನತೆ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಮಳೆ ಬರಲಿ ಎಂದು ಪುರುಷನೊಬ್ಬ ಮಹಿಳೆ ವೇಷ ಹಾಕಿ ಶಾಸ್ತ್ರ ಮಾಡಿಸಿಕೊಂಡಿದ್ದಾನೆ. ಹಾಸನ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ವಿಶೇಷ ಆಚರಣೆ ಮಾಡಲಾಗಿದೆ.
ಆರತಿ ಎತ್ತಿ ಮಡಿಲು ತುಂಬಿಸಿದ್ದಾರೆ ಗ್ರಾಮದ ಮಹಿಳೆಯರು. ಮೇ ತಿಂಗಳಾದರೂ ಒಮ್ಮೆಯೂ ಬಾರದ ಮಳೆಯಿಂದ ನೊಂದ ಗ್ರಾಮಸ್ಥರಿಂದ ವಿಶೇಷ ಹಬ್ಬ ಆಚರಣೆ ಮಾಡಲಾಯಿತು.
ರೈತರ ಬಿತ್ತನೆ ಕಾರ್ಯ ಹಿಮ್ಮುಖವಾಗೋ ಭೀತಿಯಲ್ಲಿ ಜಿಲ್ಲೆಯ ಜನತೆ ಇದ್ದಾರೆ. ಬೆಳಿಗ್ಗೆ ವಿಶೇಷ ಹಬ್ಬ ಆಚರಿಸಿದ್ದ ಸೋಮನಹಳ್ಳಿ ಗ್ರಾಮದ ಜನತೆ. ಕಾಕತಾಳೀಯವೆಂಬಂತೆ ಸಂಜೆ ವೇಳೆಗೆ ಕೃಪೆ ತೋರಿದ್ದಾನೆ ವರುಣ. ಇದರಿಂದ ಗ್ರಾಮದ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.