Select Your Language

Notifications

webdunia
webdunia
webdunia
webdunia

ರಾಜ್ಯದ ಗಡಿ ಜಿಲ್ಲೆ ಅಕ್ಷರಶಃ ನಡುಗಿದೆ; ಕಾರಣ?

ರಾಜ್ಯದ ಗಡಿ ಜಿಲ್ಲೆ ಅಕ್ಷರಶಃ ನಡುಗಿದೆ; ಕಾರಣ?
ಚಾಮರಾಜನಗರ , ಬುಧವಾರ, 1 ಮೇ 2019 (18:14 IST)
ರಾಜ್ಯದ ಗಡಿ ಜಿಲ್ಲೆಯೊಂದು ಅಕ್ಷರಶಃ ನಡುಗಿದ್ದು ಅಪಾರ ನಷ್ಟಕ್ಕೆ ಒಳಗಾಗಿದೆ.

ಇತ್ತೀಚೆಗೆ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಅಕ್ಷರಶಃ ನಲುಗಿದೆ. ಚಾಮರಾಜನಗರ ತಾಲ್ಲೂಕಿನ ಕಿಲಗೆರೆ ಹಾಗೂ ಸುತ್ತ ಮುತ್ತ ಗ್ರಾಮಗಳಲ್ಲಿ ಬಿದ್ದ ಧಾರಾಕಾರ ಮಳೆ ಹಾಗೂ ಬಿರುಗಾಳಿಯಿಂದಾಗಿ ನೂರಾರು ಎಕರೆ ಬಾಳೆ ಬೆಳೆ ನಷ್ಟವಾಗಿದೆ.

ಗಾಳಿ ಮಳೆಗೆ ಕಿಲಗೆರೆ ಗ್ರಾಮದ ನಾಗಪ್ಪ ಎಂಬುವರು 1.5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ  2000, ಶಶಿರವರ 1000, ಶಿವಸ್ವಾಮಿ ರವರ 1500,  ಮಹಾದೇವಪ್ಪರವರ 1500 ಬಾಳೆಕಟ್ಟೆ ಸಂಪೂರ್ಣ ನೆಲಕ್ಕುರುಳಿದೆ.  ಅಂಗಡಿ ಪುಟ್ಟಮಲ್ಲಪ್ಪ, ಚಿಕ್ಕಸ್ವಾಮಿ, ಚಿಕ್ಕಹೂಳೆಯ ರಾಮಚಂದ್ರ ರವರಿಗೆ ಸೇರಿದ ತೆಂಗು ಹಾಗೂ ಜೋಳದ ಬೆಳೆ ಹಾನಿಗೀಡಾಗಿದೆ. 

ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ ಸೇರಿದಂತೆ ಇನ್ನಿತರಡೆ ಸುಮಾರು 200 ಕ್ಕೂ ಹೆಚ್ಚು ತೆಂಗಿನಮರಗಳು, 100 ಕ್ಕೂ ಹೆಚ್ಚು ಬೇವಿನಮರಗಳು ನಾಶವಾಗಿವೆ. ಧಾರಕಾರ ಮಳೆಯಿಂದಾಗಿ ಈ ಭಾಗದ ರೈತರು ಕಂಗಾಲಾಗಿದ್ದಾರೆ. ಚಾಮರಾಜನಗರ ಜಿಲ್ಲಾಧಿಕಾರಿ ಬಿ. ಬಿ. ಕಾವೇರಿ ರೈತರ ಹೂಲ-ಗದ್ದೆ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಕಾರ್ಯಕರ್ತರ ಮೇಲೆ ಅನುಮಾನ ವ್ಯಕ್ತಪಡಿಸಿದ ಸಚಿವ ಜಿ.ಟಿ. ದೇವೇಗೌಡ