Select Your Language

Notifications

webdunia
webdunia
webdunia
webdunia

ಶ್ರೀಲಂಕಾ ಬಾಂಬ್ ಸ್ಫೋಟ ರೂವಾರಿ ಬೆಂಗಳೂರಲ್ಲಿ?

ಬಾಂಬ್
ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ರೂವಾರಿಗಳು ಬೆಂಗಳೂರಿಗೆ ಬಂದಿದ್ದರು ಎನ್ನುವ ವದಂತಿ ಹರಿದಾಡುತ್ತಿದೆ.

ಇದೊಂದು ಸೂಕ್ಷ್ಮ ವಿಚಾರ. ಶ್ರೀಲಂಕಾ ಘಟನೆಯಿಂದ ನಾವು ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಡಿಜಿಗೆ ಸೂಚನೆ ನೀಡಿದ್ದೇನೆ. ಉಗ್ರರು ಬೆಂಗಳೂರಿನಲ್ಲಿ ಇದ್ದ ವಿಚಾರದಲ್ಲಿ ಕೆಲವೊಂದು ಮಾಹಿತಿ ಸತ್ಯ ಇರುತ್ತೆ. ಕೆಲವು ಸುಳ್ಳು ಇರುತ್ತೆ. ಈ ಬಗ್ಗೆಯೂ ನಾವು ಎಚ್ಚರವಹಿಸಿದ್ದೇವೆ. ಹೀಗಂತ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಯಾವುದೋ ಒಬ್ಬ ಟ್ರಕ್ ಡ್ರೈವರ್ ಇದ್ದ ಅಂತ ಮಾಹಿತಿ ಬಂದಿತ್ತು. ಈ ಬಗ್ಗೆ ಡಿಜಿಗೆ ಕೂಡಾ ಮಾಹಿತಿ ಇತ್ತು. ಆದ್ರೆ ಇವ್ಯಾವು ಖಚಿತ ಮಾಹಿತಿ ಅಲ್ಲ. ಆದ್ರು ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನ ನಾವು ಮಾಡಿದ್ದೇವೆ. ಇಂತಹ ವಿಚಾರದಲ್ಲಿ ಕೇಂದ್ರ ಸರ್ಕಾರದ‌ ಪಾಲು ಹೆಚ್ಚಿದೆ. ಕೇಂದ್ರ ಸರ್ಕಾರದ ಸೂಚನೆಗಳನ್ನ ನಾವು ಪಾಲನೆ ಮಾಡ್ತೀವಿ. ಆದ್ರೂ ರಾಜ್ಯ ಸರ್ಕಾರ ಸೂಕ್ತ ಭದ್ರತೆಯನ್ನ ರಾಜ್ಯದಲ್ಲಿ ನಿಯುಕ್ತಿಗೊಳಿಸಲಾಗಿದೆ. ಹೀಗಂತ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

BSY ನಂತರ ನಾನೇ ಡೈನಾಮಿಕ್ ಲೀಡರ್ ಎಂದ ಶಾಸಕ