ಬೆಂಗಳೂರು: ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ, ನಿಜಕ್ಕೂ ಪಾಕಿಸ್ತಾನದ ಜೊತೆ ಕ್ರಿಕೆಟ್ ಮ್ಯಾಚ್ ಆಡಿದ್ದು ಯಾಕೆ ಎಂದು ಬಾಯ್ಬಿಡಲಿ ಎಂದು ಸಚಿವ ಸಂತೋಷ್ ಲಾಡ್ ಟೀಕಾ ಪ್ರಹಾರ ನಡೆಸಿದ್ದಾರೆ.
ಬಿಜೆಪಿಯವರು ಯಾವತ್ತೂ ಧರ್ಮದ ವಿಚಾರ ಮಾತ್ರ ಮಾತನಾಡೋದು. ಮತಾಂತರ ಆದವರಿಗೆ ಮೂಲ ಜಾತಿಯ ಬಗ್ಗೆ ನಮೂದಿಸಲು ಅವಕಾಶ ನೀಡಿರುವುದರ ಬಗ್ಗೆ ಬಿಜೆಪಿ ಟೀಕಿಸುತ್ತಿರುವುದಕ್ಕೆ ಸಂತೋಷ್ ಲಾಡ್ ಈ ರೀತಿ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನದ ಜೊತೆ ಮ್ಯಾಚ್ ಆಡಿದ ಬಗ್ಗೆ ವಿರೋಧ ಮಾಡಲಿ ನೋಡೋಣ. ಕೇವಲ ಧರ್ಮದ ಬಗ್ಗೆ ಮಾತ್ರನಾ ಇವರ ವಿರೋಧ. ಇವರಿಗೆ ನಾಚಿಕ ಮಾನ, ಮರ್ಯಾದೆ ಇದೆಯಾ ಎಂದು ಸಂತೋಷ್ ಲಾಡ್ ಹೇಳಿದ್ದಾರೆ. ಬಿಜೆಪಿಯವರಿಗೆ ಮುಸ್ಲಿಮರು, ಪಾಕಿಸ್ತಾನ ಇಲ್ಲದೆ ವ್ಯವಹಾರ ಇಲ್ಲ. ಅದನ್ನೇ ಇಟ್ಟುಕೊಂಡು ಬೇಳೆ ಬೇಯಿಸಿಕೊಳ್ಳುತ್ತಾರೆ. ಬಿಜೆಪಿಯವರು ಆಪರೇಷನ್ ಸಿಂಧೂರ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡಿದ್ರು.. ಅಮಿತ್ ಶಾ ಪುತ್ರ ಜಯ್ ಶಾ ನೇ ಐಸಿಸಿ ಅಧ್ಯಕ್ಷ. ಅದರ ಬಗ್ಗೆ ಮಾತನಾಡಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.