Select Your Language

Notifications

webdunia
webdunia
webdunia
webdunia

ಶೇಕ್ ಹ್ಯಾಂಡ್ ಮಾಡಿಲ್ಲ ಎಂದು ಟೀಂ ಇಂಡಿಯಾವನ್ನು ಗೇಲಿ ಮಾಡಿದ ಶಾಹಿದಿ ಅಫ್ರಿದಿ

Shahid Afridi

Krishnaveni K

ದುಬೈ , ಮಂಗಳವಾರ, 16 ಸೆಪ್ಟಂಬರ್ 2025 (14:25 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ 2025 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಳಿಕ ಶೇಕ್ ಹ್ಯಾಂಡ್ ವಿವಾದವೇ ದೊಡ್ಡ ಸದ್ದು ಮಾಡುತ್ತಿದೆ. ಇದೇ ವಿಚಾರಕ್ಕೆ ಶಾಹಿದಿ ಅಫ್ರಿದಿ ಭಾರತವನ್ನು ಗೇಲಿ ಮಾಡಿದ್ದಾರೆ.

ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವಿನ ಬಳಿಕ ಟೀಂ ಇಂಡಿಯಾ ಯಾವುದೇ ಆಟಗಾರರು ಎದುರಾಳಿಗಳ ಕೈ ಕುಲುಕಲಿಲ್ಲ. ಪಾಕ್ ಆಟಗಾರರು ಮೈದಾನದಲ್ಲಿ ಕಾಯುತ್ತಿದ್ದರೆ ಡ್ರೆಸ್ಸಿಂಗ್ ರೂಂನ ಬಾಗಿಲು ಹಾಕಿಕೊಂಡು ಅವಮಾನ ಮಾಡಿದ್ದರು. ಇದೇ ಕಾರಣಕ್ಕೆ ಶಾಹಿದಿ ಅಫ್ರಿದಿ ಭಾರತವನ್ನು ಗೇಲಿ ಮಾಡಿದ್ದಾರೆ.

‘ಶೇಕ್ ಹ್ಯಾಂಡ್ ಮಾಡದೇ ಭಾರತೀಯ ಆಟಗಾರರು ಜಗತ್ತಿನ ಮುಂದೆ ತಾವೇ ಬೆತ್ತಲಾಗಿದ್ದಾರೆ. ಇದರಲ್ಲಿ ಕ್ರಿಕೆಟಿಗರ ತಪ್ಪಿದೆ ಎಂದು ನನಗನಿಸುತ್ತಿಲ್ಲ. ಮೇಲಿನಿಂದ ಅವರಿಗೆ ನಮ್ಮ ಆಟಗಾರರ ಕೈ ಕುಲುಕಬೇಡಿ ಎಂದು ಆದೇಶ ಬಂದಿರುತ್ತದೆ. ಅದಕ್ಕೇ ಹಾಗೆ ಮಾಡಿರುತ್ತಾರೆ. ಆದರೆ ಈ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತಳೆದಿರುವ ನಿರ್ಧಾರವನ್ನು ಮೆಚ್ಚಲೇಬೇಕು. ಕ್ರೀಡಾಳುಗಳು ರಾಜಕೀಯ ಮರೆತು ಎರಡೂ ದೇಶಗಳ ನಡುವಿನ ಸೌಹಾರ್ದದ ರಾಯಭಾರಿಗಳಾಗಬೇಕು. ಆದರೆ ಟೀಂ ಇಂಡಿಯಾ ಆಟಗಾರರು ಬಹುಶಃ ರಾಜಕೀಯ ಒತ್ತಡಕ್ಕೆ ಮಣಿದು ಕೈ ಕುಲುಕದೇ  ತಾವೇ ಬೆತ್ತಲಾದರು’ ಎಂದು ಅಫ್ರಿದಿ ಗೇಲಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌, ರಾಬಿನ್ ಉತ್ತಪ್ಪಗೆ ಇಡಿ ಸಮನ್ಸ್‌