ದುಬೈ: ಐಸಿಸಿನೂ ಸೊಪ್ಪು ಹಾಕಲ್ಲ, ಬಿಸಿಸಿಐನೂ ಕ್ಯಾರೇ ಎನ್ನಲಿಲ್ಲ. ಕೊನೆಗೆ ಈಗ ಪಾಕಿಸ್ತಾನ ಒಂದೇ ದಿನಕ್ಕೆ ಥಂಡಾ ಹೊಡೆದಿದೆ. ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿದಿದೆ.
ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಶೇಕ್ ಹ್ಯಾಂಡ್ ವಿವಾದ ದೊಡ್ಡ ಸುದ್ದಿ ಮಾಡಿತ್ತು. ಟೀಂ ಇಂಡಿಯಾ ಆಟಗಾರರು ಕೈ ಕುಲುಕಲಿಲ್ಲ ಎನ್ನುವುದನ್ನೇ ಪಾಕಿಸ್ತಾನ ಆಟಗಾರರು ದೊಡ್ಡ ವಿವಾದ ಮಾಡಲು ಹೊರಟಿದ್ದರು. ಮ್ಯಾಚ್ ರೆಫರಿಯನ್ನು ಕಿತ್ತು ಹಾಕದಿದ್ದರೆ ಏಷ್ಯಾ ಕಪ್ ಟೂರ್ನಿಯನ್ನೇ ಬಹಿಷ್ಕರಿಸುತ್ತೇವೆ ಎಂದು ಪಾಕಿಸ್ತಾನ ಆಟಗಾರರು ಧುಮ್ಕಿ ಹಾಕಿದ್ದರು.
ಆದರೆ ಈಗ ಐಸಿಸಿಯಾಗಲೀ, ಬಿಸಿಸಿಐಯಾಗಲೂ ಪಾಕ್ ಬೆದರಿಕೆಗೆ ಕ್ಯಾರೇ ಎಂದಿಲ್ಲ. ಯಾಕೆಂದರೆ ಶೇಕ್ ಹ್ಯಾಂಡ್ ಮಾಡುವುದು ಐಸಿಸಿ ನಿಯಮದಲ್ಲಿಲ್ಲ. ಹೀಗಾಗಿ ಐಸಿಸಿಗೂ ಟೀಂ ಇಂಡಿಯಾ ವಿರುದ್ಧ ನೇರವಾಗಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಐಸಿಸಿಯೂ ಕೈ ಕಟ್ಟಿ ಕುಳಿತಿದೆ.
ಇದರಿಂದ ಈಗ ಪಾಕಿಸ್ತಾನವೂ ಏನೋ ಮಾಡಲು ಹೊರಟು ಏನೂ ಆಗುತ್ತಿಲ್ಲ ಎಂದು ಥಂಡಾ ಹೊಡೆದಿದೆ. ಐಸಿಸಿ ಕ್ಯಾರೇ ಎನ್ನದ ಕಾರಣ ಏಷ್ಯಾ ಕಪ್ ಬಹಿಷ್ಕರಿಸಿರುವ ತೀರ್ಮಾನದಿಂದ ಪಾಕಿಸ್ತಾನ ಹಿಂದೆ ಸರಿದಿದೆ ಎನ್ನಲಾಗಿದೆ.