Select Your Language

Notifications

webdunia
webdunia
webdunia
webdunia

BBMP ಅಧಿಕಾರಿಗಳ ವಿರುದ್ಧ ನಿವಾಸಿಗಳು ಕಿಡಿ

Residents fire against bBMP officials
bangalore , ಬುಧವಾರ, 21 ಜೂನ್ 2023 (15:29 IST)
ಬೆಂಗಳೂರಿನ ದೊಡ್ಡನೆಕ್ಕುಂದಿಯ ಫರ್ನ್ಸ್ ಸಿಟಿ ಲೇಔಟ್​ನಲ್ಲಿ ನಡೆಯುತ್ತಿರುವ ರಾಜಕಾಲುವೆ ತೆರವು ಕಾರ್ಯಚರಣೆಗೆ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ದೊಡ್ಡ ದೊಡ್ಡವರ ಬಿಲ್ಡಿಂಗ್ ಒಡೆಯೊದು ಬಿಟ್ಟು ಚಿಕ್ಕವರ ಬಿಲ್ಡಿಂಗ್ ಒಡೆಯುತ್ತಿದ್ದಾರೆ. ಬಾಗ್ಮನೆ ಬಳಿಯಿಂದ ಒತ್ತುವರಿ ಆರಂಭವಾಗಿ ದೊಡ್ಡನಕ್ಕುಂದಿ ಕೆರೆಯವರೆಗೂ ಇದೆ. ಫರ್ನ್ಸ್ ಸಿಟಿ ಲೇಔಟ್ ನಲ್ಲಿ 15 ಕಡೆ ಮಾರ್ಕ್ ಮಾಡಿದ್ದಾರೆ. ಬೇರೆಲ್ಲಾ ಕಡೆ ಸ್ಟೇ ಇದೆ, ಇಲ್ಲಿ ತೆರವು ಮಾಡಿದ್ರೆ ಕಾಲುವೆ ನಿರ್ಮಾಣ ಸಾಧ್ಯವೇ..?. ಆರಂಭದಲ್ಲಿ ತೆರವು ಮಾಡ್ತಿಲ್ಲ ಕೊನೆಯಲ್ಲಿ ತೆರವು ಮಾಡ್ತಿಲ್ಲ ಮಧ್ಯದ ಜಾಗದಲ್ಲಿ ಬಿಲ್ಡಿಂಗ್ ಒಡೆಯುತ್ತೆವೆ ಅಂತಿದ್ದಾರೆ. ಇಲ್ಲಿ ಬಂದು ತೆರವು ಮಾಡೋ ಅಗತ್ಯ ಏನಿದೆ ಎಂದು ನಿವಾಸಿಗಳು ಬಿಬಿಎಂಪಿ ಇಂಜಿನಿಯರ್​ಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ನಿವಾಸಿಗಳು ಆವಾಜ್ ಹಾಕ್ತೀದ್ದಂತೆ BBMP ಅಧಿಕಾರಿಗಳು ಜಾಗ ಖಾಲಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲ ಜಿಲ್ಲೆಗಳಲ್ಲೂ ಮಳೆ ಕೊರತೆ ಕಾಡಿದೆ