Publish Date: Wed, 21 Jun 2023 (14:22 IST)
Updated Date: Wed, 21 Jun 2023 (15:24 IST)
ರಾಜ್ಯದಲ್ಲಿ ಕರೆಂಟ್ ಬಿಲ್ನಿಂದಾಗಿ ಜನ ಬೆಚ್ಚಿಬಿದ್ದಿದ್ದಾರೆ. ವಿದ್ಯುತ್ ಬಿಲ್ ದರ ಹೆಚ್ಚಳಕ್ಕೆ ಹೋಟೆಲ್ ಮಾಲೀಕರ ಸಂಘ ಕಿಡಿಕಾರಿದೆ. ವಿದ್ಯುತ್ ದರ ಮುಂದೂಡಲು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಇಂಧನ ಸಚಿವ ಕೆ.ಜೆ ಜಾರ್ಜ್ಗೆ ಪತ್ರ ಬರೆದಿದ್ದಾರೆ. ವಿದ್ಯುತ್ ದರ ಹೆಚ್ಚಳ 1 ವರ್ಷಕ್ಕೆ ಮುಂದೂಡಬೇಕು. ವಿದ್ಯುತ್ ತೆರಿಗೆಯನ್ನು ಶೇಕಡಾ 9ರಿಂದ 3ಕ್ಕೆ ಇಳಿಕೆ ಮಾಡಬೇಕು. ವಿದ್ಯುತ್ ನಷ್ಟವನ್ನು ಕಡಿಮೆ ಮಾಡಿ. ಸರ್ಕಾರದ ಇಲಾಖೆಗಳ ಬಾಕಿ ಮೊತ್ತ ಬಡ್ಡಿ ಸಹಿತ ಸಂಗ್ರಹಿಸಿ. ಪ್ರಿಪೇಡ್ ಮೀಟರ್ ಅಳವಡಿಕೆ ಮಾಡಿ ಗ್ರಾಹಕರ ಠೇವಣಿ ಹಣ ಹಿಂತಿರುಗಿಸಬೇಕು ಎಂದು ಪತ್ರದ ಮೂಲಕ ಹೋಟೆಲ್ ಅಸೋಸಿಯೇಷನ್ ಮನವಿ ಮಾಡಿದೆ.
geetha
Publish Date: Wed, 21 Jun 2023 (14:22 IST)
Updated Date: Wed, 21 Jun 2023 (15:24 IST)