ಬೆಳಗಾವಿ : ಬಿಹಾರಕ್ಕೆ 2 ಲಕ್ಷ ಕೋಟಿ ಕೊಡ್ತೀನಿ ಅಂದ್ರಿ ಅಲ್ಲಿ ನಿತೀಶ್ ಕುಮಾರ್ ಅವರನ್ನ ಕೇಳಿ ದುಡ್ಡು ಕೊಟ್ರಾ. ಪಂಜಾಬ್ನಲ್ಲಿ ಲಕ್ಷ ಕೋಟಿ ಕೊಡ್ತೀನಿ ಅಂದ್ರು ಅಲ್ಲಿರೋರಿಗೆ ಹೇಳಿ ಘೋಷಣೆ ಮಾಡಿದ್ರಾ? ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ನಗರದಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಪಶ್ಚಿಮ ಬಂಗಾಳದಲ್ಲಿ ಘೋಷಣೆ ಮಾಡುವಾಗ ಮಮತಾ ಬ್ಯಾನರ್ಜಿನಾ ಕೇಳಿದ್ರಾ?. ಸುಮ್ನೆ ಮಾತಾಡೋದು ಬೇಡ ನಾವು ಯಾರನ್ನೂ ಕೇಳಿ ಘೋಷಣೆ ಮಾಡಿಲ್ಲ. ಕರ್ನಾಟಕದ ಜನರಿಗಾಗಿ ನಾವು ಯೋಜನೆ ಘೋಷಣೆ ಮಾಡಿದ್ದೇವೆ ಎಂದರು.
ಜುಲೈ 1ಕ್ಕೆ ಅಕ್ಕಿಯನ್ನ ಕೊಡುವ ವಾಗ್ದಾನ ಇದೆ ಖಂಡಿತ ನಮ್ಮ ವಾಗ್ದಾನ ಪೂರೈಸುತ್ತೇವೆ ಎಂದು ಲಕ್ಷ್ಮೀ ಹೇಳಿದರು.