Select Your Language

Notifications

webdunia
webdunia
webdunia
webdunia

ನಿಮಗೆ ಧಮ್, ತಾಕತ್ ಇದ್ರೆ ನೀವು ಹದಿನೈದು ಕೆಜಿ ಅಕ್ಕಿ‌ ಕೊಡಬೇಕು- ಮಾಜಿ ಸಿಎಂ ಬೊಮ್ಮಾಯಿ

If you have dham
bangalore , ಮಂಗಳವಾರ, 20 ಜೂನ್ 2023 (19:49 IST)
ಇಂದು ಏಕಾಏಕಿ ಸುದ್ದಿಗೋಷ್ಟಿ ನಡೆಸಿದ ಮಾಜಿ ಸಿಎಂ ಬಸವಾರಜ್ ಬೊಮ್ಮಾಯಿ ಕಾಂಗ್ರೆಸ್ ಸರ್ಕಾರ ಜನರಿಗೆ ಕರೆಂಟ್ ಶಾಕ್ ನೀಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.ಅಲ್ಲದೇ ಕರೆಂಟ್ ಬಿಲ್ ಜಾಸ್ತಿ ಬರ್ತಿದೆ.ಇದ್ರಿಂದ ಕೈಗಾರಿಕಾ ಕಾರ್ಖಾನೆ ನಿಂತು ಹೋಗ್ತಿದೆ.ಮಾತು ಎತ್ತಿದ್ರೆ ಕಾಂಗ್ರೆಸ್ ಬಡವರ ಬಗ್ಗೆ ಮಾತಾಡ್ತಾರೆ.ಬಡವರ ಹೆಸರು ಬಳಸಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ.ಇನ್ನು ಸ್ವಲ್ಪದಿನಗಳ್ಳಲ್ಲಿ ಬಸ್ ಗಳು ನಿಂತು ಹೋಗ್ತಿದೆ.ಸ್ಕೂಲ್‌ ಮಕ್ಕಳಿಗೆ ಬಸ್ ಸಿಗ್ತಿಲ್ಲ.ಮಂತ್ರಿಗಳು ಓಪನ್ ಆಗಿ ಕಮಿಷನ್ ಫೀಕ್ಸ್ ಮಾಡ್ತಿದ್ದಾರೆ.ವರ್ಗಾವಣೆ ಧಂಧೆ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆರೋಪ ಮಾಡಿದ್ದಾರೆ.
 
ಅಲ್ಲದೇ ಇದು ಸುಳ್ಳ, ಮಳ್ಳ ಸರ್ಕಾರ.ಮಳ್ಳನ ತರಹ ಮೋಸ ಮಾಡುವ ಸರ್ಕಾರ.ಸುಳ್ಳ ಕಾಂಗ್ರೆಸ್ ನಿಂದ ಪಾಠ ಕಲಿಯಬೇಕಿಲ್ಲ.ಸಂಕಷ್ಟದಲ್ಲಿದ್ದಾಗಲೆಲ್ಲಾ ಕೇಂದ್ರ ಸರ್ಕಾರ ಧಾವಿಸಿ ಬಂದಿದೆ.ಆಪತ್ ಮಿತ್ರರಾಗಿ ಬಂದಿದ್ದು ನರೇಂದ್ರ ಮೋದಿ.ತಾತ್ವಿಕ ಒಪ್ಪಿಗೆ ಕೊಡುವಾಗಲೇ ನಿಮಗೆ ಅಕ್ಕಿ ಇಲ್ಲ ಅಂತಾ ಗೊತ್ತಿತ್ತು.ಯಾಕೆ ಆಗ ತಯಾರಿ ಮಾಡಿಕೊಳ್ಳಲಿಲ್ಲ?ಕೇಂದ್ರ ತನ್ನ ಅಕ್ಕಿಯನ್ನು ಪೂರ್ಣ ಕೊಟ್ಟಿದೆ.ಹೆಚ್ಚುವರಿ ನೀವು ಮುಕ್ತ ಮಾರುಕಟ್ಟೆಯಲ್ಲಿ ತೆಗೆದುಕೊಳ್ಳಬೇಕು. ನಿಮಗೆ ಧಮ್, ತಾಕತ್ ಇದ್ರೆ ನೀವು ಹದಿನೈದು ಕೆಜಿ ಅಕ್ಕಿ‌ ಕೊಡಬೇಕು.ಇದು ಮಾಡದೇ ಪ್ರತಿಭಟನೆ ಮಾಡ್ತೀರಾ?ನಿಮಗೆ ಅಧಿಕಾರ ಕೊಟ್ಟಿದ್ದು ಪ್ರತಿಭಟನೆ ಮಾಡೋಕಾ?ನಾಚಿಕೆ ಇಲ್ಲವೇ ನಿಮಗೆ? ಅಂತಾ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ‌ ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೂಲ್ ಕೂಲ್ ಆದ ಸಿಲಿಕಾನ್ ಸಿಟಿ ವೆದರ್