Select Your Language

Notifications

webdunia
webdunia
webdunia
webdunia

ಲಂಚ ಮುಕ್ತ ಕರ್ನಾಟಕ ಮಾಡುತ್ತೇವೆ: ಶಿವಕುಮಾರ್ ಶಪಥ

ಲಂಚ ಮುಕ್ತ ಕರ್ನಾಟಕ ಮಾಡುತ್ತೇವೆ: ಶಿವಕುಮಾರ್ ಶಪಥ
ಬೆಂಗಳೂರು , ಬುಧವಾರ, 21 ಜೂನ್ 2023 (11:15 IST)
ಬೆಂಗಳೂರು : ಲಂಚ ಮುಕ್ತ ಕರ್ನಾಟಕವನ್ನಾಗಿ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ಶಪಥ ಮಾಡಿದರು.
 
ನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಯಾರೂ ಲಂಚ ಕೇಳಬಾರದು. ಲಂಚ ಕೇಳದೆ ಕೆಲಸ ಮಾಡಿಕೊಡಬೇಕು. ನಾವು ಕಾಲ್ ಸೆಂಟರ್ ಮಾಡ್ತೀವಿ. ನಮ್ಮ ಕಾರ್ಯಕರ್ತರು ಲಂಚ ಕೇಳಿದ್ರೂ ಕೇಸ್ ಹಾಕೋದೇ. ಲಂಚ ಮುಕ್ತ ಕರ್ನಾಟಕ ಆಗಬೇಕು ಎಂದು ಒತ್ತಿ ಹೇಳಿದರು.

ಉಚಿತ ವಿದ್ಯುತ್ ಗೆ ನೋಂದಣಿ ಆರಂಭ ಆಗಿದೆ. ಬಹಳ ಆತುರಪಡಬೇಡಿ, ನೂಕುನುಗ್ಗಲು ಮಾಡಬೇಡಿ. ಸರ್ವರ್ ಕೂಡ ಕಡಿಮೆ ಆಗಿದೆ. ಅದಕ್ಕೆ ಗೃಹಲಕ್ಷ್ಮಿ ಯೋಜನೆಗೆ ನಾವು ಸ್ವಲ್ಪ ಟೈಮ್ ತೆಗೆದುಕೊಂಡಿದ್ದೀವಿ. ನಮ್ಮ ಕಾರ್ಯಕರ್ತರು ಪಕ್ಷ ಬೇಧ ಮರೆತು ಎಲ್ಲರಿಗೂ ಕೊಡಬೇಕು. ಬೇಡ ಅಂದೋರಿಗೆ ಬೇಡ, ಬೇಕು ಅಂದೋರಿಗೆ ಕೊಡೋಣ ಎಂದರು.

ರಾಮಲಿಂಗಾರೆಡ್ಡಿಯವರ ಮನೆಯ ಹೆಂಗಸರು ಬಸ್ನಲ್ಲಿ ಓಡಾಡಲ್ಲ ಅಂದ್ರೆ ಬೇಡ. ನಾರಾಯಣಸ್ವಾಮಿ ನಿಮ್ಮ ಮನೆಯವರನ್ನ ಕರೆದುಕೊಂಡು ಓಡಾಡಿ. ನಮ್ಮ ಮನೆಯವರು ಬೇಕಾದ್ರೂ ಅರ್ಜಿ ಹಾಕಲಿ ನಾನು ಬೇಡ ಎನ್ನಲ್ಲ. ಎರಡು ಸಾವಿರ ಬೇಕು, ಸಂಸಾರ ನಡೆಸಬೇಕು ಅಂತಿದ್ರೆ ಅರ್ಜಿ ಹಾಕಿಕೊಳ್ಳಲಿ ಎಂದು ಡಿಕೆಶಿ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತಾಕತ್ತಿದ್ದರೆ ಅಕ್ಕಿ ಕೊಡಿ : ಬಸವರಾಜ ಬೊಮ್ಮಾಯಿ ಕಿಡಿ