ಜುಲೈ ಮೊದಲ ವಾರದಲ್ಲಿ ಬರಗಾಲ ಘೋಷಣೆ ಮಾಡಬೇಕಾ ಅಥವಾ ಬೇಡ್ವಾ ಎಂದು ತೀರ್ಮಾನವಾಗುತ್ತೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಳೆ ಸಮಸ್ಯೆ ಬಗ್ಗೆ ಕಳೆದ ಜೂನ್ ತಿಂಗಳಲ್ಲಿ ಇದೆ ಅಂತಾ ಹೇಳಿದ್ದೆ. ಎಲ್ಲ ಜಿಲ್ಲೆಗಳಲ್ಲೂ ಮಳೆ ಕೊರತೆ ಕಾಡಿದೆ... ಮೋಡ ಬಿತ್ತನೆ ಬಗ್ಗೆ ಸದ್ಯಕ್ಕೆ ಯಾವುದೇ ಚರ್ಚೆ ಆಗಿಲ್ಲ.. ಈ ವರ್ಷ ಮಾನ್ಸೂನ್ ರಿಕವರಿ ಆಗುತ್ತದೆ ಎಂಬ ವಿಶ್ವಾಸ ಇದೆ.. ನೀರಿನ ಕೊರತೆ ಇರುವ ಕಡೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡುವಂತೆ ಸೂಚನೆ ಕೊಟ್ಟಿದ್ದೇವೆ ಅಧಿಕಾರಿಗಳಿಗೂ ನಾವು ಕಠಿಣ ಸೂಚನೆ ಕೊಟ್ಟಿದ್ದೇವೆ..ರಾಜ್ಯದ 800 ಕಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.. ಅಲ್ಲಿ ಸಮಸ್ಯೆ ಆದ 24 ಗಂಟೆಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು ಅಗತ್ಯ ಸೂಚನೆ ಕೊಟ್ಟಿದ್ಸೇವೆ. 806 ಕಡೆ ಟ್ಯಾಂಕರ್ ಹಾಗೂ ಬೋರ್ವೆಲ್ ಮೂಲಕ ನೀರಿನ ವ್ಯವಸ್ಥೆ ಮಾಡ್ತಿದ್ದೇವೆ ಅಂತಾ ತಿಳಿಸಿದ್ದಾರೆ.