ದಾವಣಗೆರೆ: ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಅಂಗೀಕರಿಸಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ನಿಯಂತ್ರಣ ವಿಧೇಯಕ-2025 ಸಂಬಂಧ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಈ ಮೂಲಕ ಹಿಂದೂಗಳನ್ನು, ಹಿಂದೂ ಸಂಘಟನೆ ಹಾಗೂ ಹಿಂದೂ ಮುಖಂಡರನ್ನು ಹತ್ತಿಕ್ಕುವ ಹುನ್ನಾರ ಹಾಗೂ ದೊಡ್ಡ ಷಡ್ಯಂತ್ರ ಎಂದು ಆರೋಪ ಮಾಡಿದರು.
ಈ ವಿಚಾರವಾಗಿ ಸುದ್ದಗೋಷ್ಠಿಯಲ್ಲಿ ವಿಧೇಯಕ ಬರಹದ ಹಾಳೆ ಹರಿದು ಆಕ್ರೋಶ ಹೊರಹಾಕಿದರು, ದ್ವೇಷ ಭಾಷಣ, ದ್ವೇಷ ಅಪರಾಧ ಎಂದರೆ ಏನು ಎಂಬ ವ್ಯಾಖ್ಯಾನ ಇಲ್ಲದೆ ಈ ಮಸೂದೆ ತಂದಿದ್ದಾರೆ. ಇದನ್ನು ಹಿಂದೂಗಳ ವಿರುದ್ಧ ದುರ್ಲಾಭ ಪಡೆಯಲು ಬಳಸುವ ವ್ಯವಸ್ಥಿತ ಪ್ರಯತ್ನ ಎಂದರು.
ಗೋಹತ್ಯೆ ನಿಷೇಧ ಕಾಯಿದೆ ಇದ್ದರೂ ಸಾಕಷ್ಟು ಗೋ ಕಳ್ಳತನಗಳನ್ನು ಹಾಗೆಯೇ ಮುಂದುವರೆದಿದೆ.
ಇದರ ವಿರುದ್ಧ ಮಾತನಾಡುವುದು, ಪ್ರತಿಭಟನೆ ಮಾಡುವುದು ಗೋರಕ್ಷಣೆ ಬಗ್ಗೆ ಭಾಷಣ ಮಾಡುವುದು ದ್ವೇಷ ಆಗುತ್ತಾ? ಲವ್ ಜಿಹಾದ್ ಬಗ್ಗೆ ಮಾತನಾಡುವುದು ನಮ್ಮ ಧರ್ಮ. ಪ್ರೀತಿ ಹೆಸರಿನಲ್ಲಿ ಮತಾಂತರ, ಗೋಮಾಂಸ ತಿನ್ನಿಸುವುದು, ಬುರ್ಕಾ ಹಾಕಿಸುವುದನ್ನು ತಡೆಯುವುದು ದ್ವೇಷ ಆಗುತ್ತಾ? ಹಿಂದೂ ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸುವುದು ದ್ವೇಷ ಆಗುತ್ತಾ?ಕ್ರಿಶ್ಚಿಯನ್ ಮತಾಂತರ ಮಾಡುವುದನ್ನು ವಿರೋಧಿಸಿ, ನಮ್ಮ ಭಾಷಣಗಳಲ್ಲಿ ಜಾಗೃತಿ ಮೂಡಿಸುವುದು ದ್ವೇಷ ಆಗುತ್ತಾ? ಇದು ಅಪರಾಧ ಆಗುತ್ತಾ ಎಂದು ಪ್ರಶ್ನೆ ಹಾಕಿದರು.