Select Your Language

Notifications

webdunia
webdunia
webdunia
webdunia

ಪಂಜಾಬ್ ನಲ್ಲೇ 500 ಕೋಟಿ, ನಮ್ಮಲ್ಲಿ ಕಾಂಗ್ರೆಸ್ಸಿಗರು ಹೈಕಮಾಂಡ್ ಗೆ ಎಷ್ಟು ಕೊಡ್ತಾರೋ: ಆರ್ ಅಶೋಕ್

R Ashok

Krishnaveni K

ಬೆಂಗಳೂರು , ಸೋಮವಾರ, 8 ಡಿಸೆಂಬರ್ 2025 (11:19 IST)
ಬೆಂಗಳೂರು: ಪಂಜಾಬ್ ನಲ್ಲೇ ಸಿಎಂ ಕುರ್ಚಿಗೆ 500 ಕೋಟಿಯಂತೆ ನಮ್ಮ ರಾಜ್ಯದಲ್ಲಿ ಸಿಎಂ ಕುರ್ಚಿ ಬೇಕೆಂದರೆ ಕಾಂಗ್ರೆಸ್ ಹೈಕಮಾಂಡ್ ಗೆ ಎಷ್ಟು ಕೋಟಿ ಕೊಡಬೇಕಾದೀತು ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ ಮಾಡಿದ್ದಾರೆ.

ಪಂಜಾಬ್ ನಲ್ಲಿ ಸಿಎಂ ಕುರ್ಚಿ ಸಿಗಬೇಕೆಂದರೆ ಕಾಂಗ್ರೆಸ್ ಹೈಕಮಾಂಡ್ ಗೆ 500 ಕೋಟಿ ರೂ. ಕೊಡಬೇಕು. ನಮ್ಮ ಬಳಿ ಅಷ್ಟು ದುಡ್ಡಿಲ್ಲ ಎಂದು ಕಾಂಗ್ರೆಸ್ ಮಾಜಿ ನಾಯಕ ಸಿಧು ಪತ್ನಿ ಗಂಭೀರ ಆರೋಪ ಮಾಡಿದ್ದರು. ಅವರ ಆರೋಪ ಉಲ್ಲೇಖಿಸಿ ಆರ್ ಅಶೋಕ್ ಕರ್ನಾಟಕದ ಪರಿಸ್ಥಿತಿ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

‘ಪಂಜಾಬ್ ನಂತಹ ಸಣ್ಣ ರಾಜ್ಯದಲ್ಲೇ ₹500 ಕೋಟಿ ಇದ್ದರೆ ಇನ್ನು ಕರ್ನಾಟದಂತಹ ಸಂಪದ್ಭರಿತ ರಾಜ್ಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿಎಂ ಕುರ್ಚಿಗೆ ಎಷ್ಟು ರೇಟ್ ಫಿಕ್ಸ್ ಮಾಡಿರಬಹುದು?

ನಾಯಕತ್ವ ಬದಲಾವಣೆ ವಿಷಯ ದೆಹಲಿಯಲ್ಲಿ ನಮ್ಮ ಐದಾರು ಜನರ ನಡುವಿನ ಗುಟ್ಟಿನ "ವ್ಯಾಪಾರ" ಅಂತ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದು ಬಹುಶಃ ಇದಕ್ಕೇ ಇರಬೇಕು.

ಒಟ್ಟಿನಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಕರ್ನಾಟಕವನ್ನ #ATMSarkara ಮಾಡಿಕೊಳ್ಳುವ ಕಾಂಗ್ರೆಸ್ ಹೈಕಮಾಂಡ್ ಕನ್ನಡಿಗರನ್ನ ಬ್ರಿಟಿಷರಿಗಿಂತ ಹೆಚ್ಚು ಲೂಟಿ ಮಾಡಿದೆ ಎಂದರೆ ತಪ್ಪಾಗಲಾರದು’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಮಲಾ ಸೀತಾರಾಮನ್ ಎಂತವ್ಳು ಅವ್ಳು ಎಂದ ಸಿದ್ದರಾಮಯ್ಯ: ವಿಡಿಯೋ