ಬೆಂಗಳೂರು: ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆಯಲ್ಲಿರುವಾಗಲೇ ಮತ್ತೊಬ್ಬ ಪ್ರಮುಖ ಸಚಿವರು ನನಗೂ ಸಿಎಂ ಆಗುವ ಆಸೆಯಿದೆ ಎಂದು ಬಾಂಬ್ ಹಾಕಿದ್ದಾರೆ.
ಈಗಾಗಲೇ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಅಧಿಕಾರ ಹಂಚಿಕೆ ಕುಸ್ತಿ ನಡೆಯುತ್ತಿದೆ. ಇದರ ನಡುವೆ ಡಾ ಜಿ ಪರಮೇಶ್ವರ್ ನಾನೂ ಸಿಎಂ ಆಗಬೇಕು ಎಂದಿದ್ದರು. ಇದೀಗ ಮತ್ತೊಬ್ಬ ಸಚಿವರೂ ನನಗೂ ಸಿಎಂ ಆಗಬೇಕು ಎಂದು ಆಸೆ ಹೊರಹಾಕಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡಾ ನಾನೂ ಸಿಎಂ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. ನನಗೂ ಸಿಎಂ ಆಗುವ ಆಸೆಯಿದೆ. ಆದರೆ ಅಂತಿಮ ನಿರ್ಧಾರ ಹೈಕಮಾಂಡ್ ನದ್ದು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಭಿನ್ನಾಭಿಪ್ರಾಯವೂ ಇಲ್ಲ. ಎಲ್ಲರಿಗೂ ಸಿಎಂ ಆಗುವ ಆಸೆಯಿದೆ. ನನಗೂ ಸಿಎಂ ಆಗಬೇಕು ಎಂಬ ಆಸೆಯಿದೆ. ಆದರೆ ಅಂತಿಮವಾಗಿ ಯಾರು ಸಿಎಂ ಆಗಬೇಕು ಎಂದು ತೀರ್ಮಾನ ಮಾಡುವುದು ಹೈಕಮಾಂಡ್ ಎಂದಿದ್ದಾರೆ.