ಬೆಂಗಳೂರು: ದೇಶದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಎಂತವ್ಳು ಅವ್ಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ವಿಡಿಯೋವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಬಗ್ಗೆ ಟೀಕೆ ಮಾಡುವ ಭರದಲ್ಲಿ ಸಿಎಂ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದಾರೆ. ದೇಶದ ವಿತ್ತ ಸಚಿವೆ ಬಗ್ಗೆ ಹೇಳುವಾಗ ಸಿಎಂ ಸಿದ್ದರಾಮಯ್ಯನವರಿಗೆ ಹೆಸರು ಮರೆತು ಹೋಗಿತ್ತು. ಹೀಗಾಗಿ ಮಾಧ್ಯಮಗಳಿಗೇ ಎಂತವ್ಳು ಅವ್ಳು ಎಂದು ಕೇಳಿದ್ದಾರೆ.
ಅವರ ಈ ವಿಡಿಯೋವನ್ನು ಬಿವೈ ವಿಜಯೇಂದ್ರ ಹಂಚಿಕೊಂಡಿದ್ದು ದೇಶದ ವಿತ್ತ ಸಚಿವೆಯನ್ನು ಸಂಬೋಧಿಸುವ ರೀತಿಯೇ ಇದು? ಮುಖ್ಯಮಂತ್ರಿಯಂತಹ ಜವಾಬ್ಧಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಆಡುವ ಮಾತುಗಳೇ ಇದು. ಕನಿಷ್ಠ ಸೌಜನ್ಯವೂ ಗೊತ್ತಿಲ್ಲವೇ ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯನವರು ಈ ಹಿಂದೆ ರಾಷ್ಟ್ರಪತಿಗಳಿಗೂ ಏಕವಚನದಲ್ಲಿ ಸಂಬೋಧಿಸಿದ್ದು ಟೀಕೆಗೆ ಕಾರಣವಾಗಿತ್ತು. ಈಗ ವಿತ್ತ ಸಚಿವೆಯನ್ನೂ ಏಕವಚನದಲ್ಲಿ ಸಂಬೋಧಿಸಿದ್ದು ಟೀಕೆಗೊಳಗಾಗಿದ್ದಾರೆ.