Select Your Language

Notifications

webdunia
webdunia
webdunia
webdunia

ದೀಪಾವಳಿಗೆ ಅನ್ನದಾತರಿಗೆ ಕಗ್ಗತ್ತಲ ಗ್ಯಾರಂಟಿ: ಆರ್ ಅಶೋಕ್

R Ashok

Krishnaveni K

ಬೆಂಗಳೂರು , ಶನಿವಾರ, 18 ಅಕ್ಟೋಬರ್ 2025 (13:15 IST)
ಬೆಂಗಳೂರು: ದೀಪಾವಳಿ ದಿನ ಕಾಂಗ್ರೆಸ್ ಸರ್ಕಾರದ ವತಿಯಿಂದ ಅನ್ನದಾತರಿಗೆ ಕಗ್ಗತ್ತಲ ಗ್ಯಾರಂಟಿ ಸಿಕ್ಕಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟಾಂಗ್ ಕೊಟ್ಟಿದ್ದಾರೆ.

‘ಅನ್ನದಾತರಿಗೆ ಕಗ್ಗತ್ತಲ ದೀಪಾವಳಿ ಗ್ಯಾರೆಂಟಿ ನೀಡಿದ ರೈತವಿರೋಧಿ ಕಾಂಗ್ರೆಸ್ ಸರ್ಕಾರ! ನೆರೆಪೀಡಿತ ಪ್ರದೇಶಗಳಲ್ಲಿ ಕಾಟಾಚಾರದ ವೈಮಾನಿಕ ಸಮೀಕ್ಷೆ ಮಾಡಿ ಕೈತೊಳೆದುಕೊಂಡ ಸಿಎಂ ಸಿದ್ದರಾಮಯ್ಯ ಸರ್ಕಾರ, ಲಕ್ಷಾಂತರ ರೈತ ಕುಟುಂಬಗಳು ಈ ದೀಪಾವಳಿಯನ್ನು ಕಗ್ಗತ್ತಲಲ್ಲಿ ಕಳೆಯುವ ದುಸ್ಥಿತಿಗೆ ದೂಡಿದೆ.

ಒಂದು ಕಡೆ ಕೇಂದ್ರ ಸರ್ಕಾರದ ಜಿಎಸ್ಟಿ ದರ ಇಳಿಕೆಯಿಂದ ಜನಸಾಮಾನ್ಯರು ತಮಗೆ ಇಷ್ಟವಾದ ವಸ್ತುಗಳನ್ನು ಕೊಳ್ಳುವ ಮೂಲಕ  ಸಂತೋಷದಿಂದ ದೀಪಾವಳಿ ಹಬ್ಬಕ್ಕಾಗಿ ಕಾಯುತ್ತಿದ್ದರೆ, ಮತ್ತೊಂದು ಕಡೆ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಉತ್ತರ ಕರ್ನಾಟಕ ಭಾಗದ ನೆರೆಪೀಡಿತ ರೈತರು ಪರಿಹಾರಕ್ಕಾಗಿ ಕಾದೂ ಕಾದು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ಎದುರಾಗಿದೆ. ಈ ರೈತ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ಅನ್ನದಾತರ ಶಾಪ ತಟ್ಟದೇ ಇರದು’ ಎಂದು ಕಿಡಿ ಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೃದಯದ ಆರೋಗ್ಯ ನೋಡಿಕೊಳ್ಳಲು ಸಿಂಪಲ್ ಟ್ರಿಕ್ಸ್ ಹೇಳುತ್ತಾರೆ ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿ