ದೀಪಾವಳಿ ಹಬ್ಬದ ಬಳಿಕ ಕೆಲವರ ಜೀವನದಲ್ಲಿ ಏಳಿಗೆಯಾದರೆ ಮತ್ತೆ ಕೆಲವರ ಜೀವನದಲ್ಲಿ ಸಂಕಷ್ಟಗಳು ಬರಬಹುದು. ಈ ದೀಪಾವಳಿ ಬಳಿಕ ಐದು ರಾಶಿಯವರಿಗೆ ಕೆಲವೊಂದು ವಿಚಾರಗಳಲ್ಲಿ ಸಂಕಷ್ಟಗಳು ಎದುರಾಗಬಹುದು. ಆ ಐದು ರಾಶಿಯವರು ಯಾರೆಲ್ಲಾ ಇಲ್ಲಿದೆ ನೋಡಿ ವಿವರ.
ಮೇಷ: ಸಂಬಂಧಗಳು ಮತ್ತು ಸಹಭಾಗಿತ್ವದಲ್ಲಿ ಸಮಸ್ಯೆ
ನಿಮ್ಮ ಸಂಬಂಧಗಳ ನಡುವೆ ಬಿರುಕು ಅಥವಾ ಮಾತಿನಿಂದಲೇ ಸಮಸ್ಯೆಗಳು ಬರುವ ಸಾಧ್ಯತೆಯಿದೆ. ಹೀಗಾಗಿ ಖಡಕ್ ಮಾತುಗಳ ಬದಲು ಸ್ವಲ್ಪ ಮೃದುವಾಗಿ ಮಾತನಾಡಿ ಪರಿಸ್ಥಿತಿ ನಿಭಾಯಿಸಿದರೆ ಸಮಸ್ಯೆ ಪರಿಹಾರವಾದೀತು.
ಸಿಂಹ ರಾಶಿ: ಐಡೆಂಟಿಟಿ, ಅಹಂ ಭಾವ ಮತ್ತು ಆಂತರಿಕ ಕಲಹಳು
ಚಂದ್ರ ಮತ್ತು ಕೇತುವಿನಿಂದಾಗಿ ಚಂದ್ರ ಗ್ರಹಣ ದೋಷ ಉಂಟಾಗುವ ಸಾಧ್ಯತೆ. ಸಂಬಂಧಗಳಲ್ಲಿ ದಿಡೀರ್ ಬದಲಾವಣೆ, ವೃತ್ತಿ ಜೀವನದಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ.
ಕರ್ಕಟಕ ರಾಶಿ: ಭಾವನಾತ್ಮಕ ನೋವು, ಮನೆ, ಆರ್ಥಿಕ ಸ್ಥಿತಿಗಳಲ್ಲಿ ಸವಾಲುಗಳು
ಹಳೆಯ ನೋವಿನ ವಿಚಾರಗಳು ಮತ್ತೆ ಕೆದಕಿ ನಿಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಬಹುದು. ಮನೆ ಮತ್ತು ಆರ್ಥಿಕ ಪರಿಸ್ಥಿತಿಗಳಲ್ಲಿ ಸಡನ್ ಬದಲಾವಣೆಗಳು ಕಂಡುಬರಬಹುದು.
ಮಕರ ರಾಶಿ: ಬದಲಾವಣೆ ಮತ್ತು ಮಾನಸಿಕ ವಿಚಾರಗಳು, ಆಂತರಿಕ ಬಿಕ್ಕಟ್ಟುಗಳು
ಎಂಟನೇ ಮನೆಯಲ್ಲಿ ಚಂದ್ರ ಮತ್ತು ಕೇತು ಇರುವುದರಿಂದ ಆಂತರಿಕ ವಿಚಾರಗಳನ್ನು ಅದು ಆಳುತ್ತದೆ. ಇದರಿಂದ ದಿಡೀರ್ ಆರ್ಥಿಕ ಏಳು-ಬೀಳುಗಳು, ನಿಮ್ಮೊಳಗಿನ ಭಯವನ್ನು ಎದುರಿಸುವ ಅನಿವಾರ್ಯತೆ ಸೃಷ್ಟಿಸುತ್ತದೆ.
ವೃಶ್ಚಿಕ: ಒತ್ತಡ, ಸ್ವಯಂ ಕಾಳಜಿ, ವೃತ್ತಿಪರ ಏಕಾಗ್ರತೆ
ಈ ರಾಶಿಯವರಿಗೆ ವೈಯಕ್ತಿಕ ಮತ್ತು ವೃತ್ತಿ ಜೀವನದ ನಡುವೆ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಒತ್ತಡಗಳು ಎದುರಾಗಬಹುದು. ಹೀಗಾಗಿ ನಿಮ್ಮನ್ನು ನೀವು ನೋಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ.