Select Your Language

Notifications

webdunia
webdunia
webdunia
webdunia

ಬಿಜೆಪಿ ಮೇಲೆ ಗುತ್ತಿಗೆದಾರರಿಗೆ ಕಮಿಷನ್ ಆರೋಪ ಮಾಡಿದ್ರಿ, ನಿಮ್ದೇನು ಕತೆ: ಆರ್ ಅಶೋಕ್ ಟಾಂಗ್

R Ashok

Krishnaveni K

ಬೆಂಗಳೂರು , ಶನಿವಾರ, 18 ಅಕ್ಟೋಬರ್ 2025 (10:39 IST)
ಬೆಂಗಳೂರು: ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿ ಅಧಿಕಾರಕ್ಕೆ ಬಂದ್ರಿ. ಈಗ ನಿಮ್ಮದೇನು ಕತೆ. ಗುತ್ತಿಗೆದಾರರು ಬಿಲ್ ಬಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರೆ ಕೋರ್ಟ್ ಗೆ ಹೋಗಿ ಅಂತೀರಾ ಎಂದು ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್ ಅಶೋಕ್ ಟಾಂಗ್ ಕೊಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ಅವರು ‘ಸಿಎಂ ಸಿದ್ದರಾಮಯ್ಯನವರೇ, 40% ಕಮಿಷನ್ ಎಂಬ ಸುಳ್ಳು ಕಪೋಲಕಲ್ಪಿತ ಆರೋಪ ಮಾಡಿ ಕನ್ನಡಿಗರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ತಾವು ಈಗ ಅದ್ಯಾವ ಮುಖ ಇಟ್ಟುಕೊಂಡು ಕಮಿಷನ್ ನಿಜ ಇದ್ದರೆ ಕೋರ್ಟಿಗೆ ಹೋಗಿ ಎಂದು ಗುತ್ತಿಗೆದಾರರಿಗೆ ಹೇಳುತ್ತಿದ್ದೀರಿ?

ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ಪಕ್ಷ ಆರೋಪ ಮಾಡುವ ಮುನ್ನ, ಹಾದಿ ಬೀದಿಯಲ್ಲಿ ಅದೆಂತದೋ PayCM ಸ್ಟಿಕ್ಕರ್ ಅಂಟಿಸುವ ಮುನ್ನ ಕೋರ್ಟ್ ಗೆ ಹೋಗಿ ಎಂದು ಯಾಕೆ ಹೇಳಲಿಲ್ಲ?

ಇಷ್ಟಕ್ಕೂ ಕಂಟ್ರಾಕ್ಟರ್ ಗಳ ಬಿಲ್ ಪಾವತಿಯಲ್ಲಿ ತಮಗೆ ಎಷ್ಟು ಪರ್ಸಂಟೇಜ್ ಕಮಿಷನ್ ಬೇಡಿಕೆ ಇಟ್ಟಿದ್ದೀರಿ? ಇದರಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ  ಅವರ ಪಾಲೆಷ್ಟು? ಹೈಕಮಾಂಡ್ ಏಜೆಂಟುಗಳಾದ ರಣದೀಪ್ ಸುರ್ಜೇವಾಲ ಹಾಗು ಕೆಸಿ ವೇಣುಗೋಪಾಲ್ ಅವರಿಗೂ ಪಾಲಿದೆಯಾ?

ನಾಚಿಕೆಯಾಗಬೇಕು ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ದುಡ್ಡಿಲ್ಲದೆ ಸರ್ಕಾರವನ್ನು ಪಾಪರ್ ಮಾಡಿದ್ದೀರಿ. ಅಪರೂಪಕ್ಕೆ ಕೊಡೋ ಬಿಲ್ಲಿಗೂ 80% ಕಮಿಷನ್ ಬೇಡಿಕೆ ಇಡುತ್ತಿದೀರಿ. ನಿಮ್ಮ ಸರ್ಕಾರದ ಲಜ್ಜೆಗೆಟ್ಟ ಭ್ರಷ್ಟಾಚಾರ, ಕಮಿಷನ್ ದಾಹದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ನಿಂತು ಹೋಗಿವೆ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ಇರುವ ಅಲ್ಪ ಸ್ವಲ್ಪ ಗೌರವ ಉಳಿಸಿಕೊಳ್ಳಿ. ಕರ್ನಾಟಕವನ್ನು ಉಳಿಸಿ’ ಎಂದು  ವಾಗ್ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಫೋಸಿಸ್ ನವರು ಬೃಹಸ್ಪತಿಗಳಾ ಎಂದ ಸಿದ್ದರಾಮಯ್ಯ: ನಿಮಗಿಂತಲೂ ದೊಡ್ಡ ಕೊಡುಗೆ ನೀಡಿದ್ದಾರೆ ಎಂದ ನೆಟ್ಟಿಗರು