Select Your Language

Notifications

webdunia
webdunia
webdunia
webdunia

ಪ್ರಶ್ನೆಪತ್ರಿಕೆ ಲೀಕ್ ಮಾಡಿದ್ದೇ ಕಾಶಿನಾಥ್..!

Question paper leaked by Kashinath
bangalore , ಸೋಮವಾರ, 9 ಮೇ 2022 (20:04 IST)
545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ..ತನಿಖೆ ವೇಳೆ ಒಂದೊಂದೇ ಸ್ಫೋ ಟಕ ಮಾಹಿತಿ ಲಭ್ಯವಾಗುತ್ತಿದೆ..ಇನ್ನು ತನಿಖೆಯಲ್ಲಿ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯ ಹೆಡ್​​​ಮಾಸ್ಟರ್ ಆಗಿರುವ ಕಾಶೀನಾಥ್ ಕಳ್ಳಾಟ ಬಯಲಾಗಿದೆ. ಜ್ಞಾನಜ್ಯೋತಿ ಶಾಲೆಯಲ್ಲಿ ಪ್ರಶ್ನೆಪತ್ರಿಕೆ ಲೀಕ್ ಮಾಡಿದ್ದೇ ಕಾಶಿನಾಥ್ ಎನ್ನುವ ಸತ್ಯ ಬಯಲಾಗಿದೆ..ಶಾಲೆಗೆ ಬಂದ ಪ್ರಶ್ನೆ ಪತ್ರಿಕೆ ಬಂಡಲ್ ಓಪನ್ ಮಾಡಿ ಶಾಲೆಯಲ್ಲೇ ಜೆರಾಕ್ಸ್ ಮಾಡಿದ್ದನಂತೆ..ಜೆರಾಕ್ಸ್ ಪ್ರತಿಯನ್ನ ಹೊರಗಡೆ ಇರೋ ಕಿಂಗ್‌ಪಿನ್‌ಗಳಿಗೆ ನೀಡುತ್ತಿದ್ದ..ಅಲ್ಲದೇ, ಕಿಂಗ್‌ಪಿನ್‌ಗಳು ಬ್ಲೂಟೂತ್ ಮೂಲಕ ಅಭ್ಯರ್ಥಿಗಳಿಗೆ ಕೀ ಅನ್ಸರ್‌ಗಳನ್ನ ಹೇಳುತ್ತಿದ್ದರು..ನಿನ್ನೆ ಸಿಐಡಿ ಅಧಿಕಾರಿಗಳು ಜ್ಞಾನಜ್ಯೋತಿ ಶಾಲೆಗೆ ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ..ಶಾಲೆಯಲ್ಲಿನ ಕಂಪ್ಯೂಟರ್, ಹಾರ್ಡ್‌ಡಿಸ್ಕ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನ ಸೀಜ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮದ ಸಕ್ಸಸ್ ಖುಷಿಗೆ ಗ್ರೂಪ್ ಫೋಟೋ