Select Your Language

Notifications

webdunia
webdunia
webdunia
webdunia

‘ಹತ್ಯೆಗೆ ಪ್ಲ್ಯಾನ್‌ ಎಂಬ ಸುದ್ದಿ ಸುಳ್ಳು’

News about the assassination plan false
bangalore , ಸೋಮವಾರ, 9 ಮೇ 2022 (19:33 IST)
ಬೆಂಗಳೂರಿನಲ್ಲಿ ಹಿಂದೂ ಮುಖಂಡರ ಹತ್ಯೆಯ ಸಂಚು ಸುಳ್ಳು, ಧರ್ಮ ದಂಗಲ್‌ಗೂ, ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಬೆಂಗಳೂರಿನಲ್ಲಿ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್‌ ಗುಳೇದ್‌ ಸ್ಪಷ್ಟನೆ ನೀಡಿದ್ದಾರೆ..ರಾಜಧಾನಿಯಲ್ಲಿ ಗಲಭೆ ಸೃಷ್ಟಿಸಲು ಪ್ಲ್ಯಾನ್‌ ಮಾಡಲಾಗಿತ್ತು ಎಂಬುದು ಶುದ್ಧ ಸುಳ್ಳು..ಅದರಲ್ಲೂ, ಹಿಂದೂ ಕಾರ್ಯಕರ್ತರ ಹತ್ಯೆಗೆ ಪ್ಲ್ಯಾನ್‌ ಮಾಡಿದ್ದಾರೆ ಅನ್ನೋದೇ ಸುಳ್ಳು..ಯಾವುದೇ ಹಿಂದೂ ಕಾರ್ಯಕರ್ತರ ಹತ್ಯೆಗೆ ಸ್ಕೆಚ್‌ ಹಾಕಿಲ್ಲ..ಬದಲಾಗಿ ವೈಯಕ್ತಿಕ ದ್ವೇಷದಿಂದ ಅಜೀಬುಲ್ಲಾ ಮೇಲೆ ಅಟ್ಯಾಕ್‌ ಮಾಡಲು ಪ್ಲ್ಯಾನ್‌ ಮಾಡಿದ್ರು. ಇದರಲ್ಲಿ ಯಾವುದೇ ಸಂಘಟನೆಯ ಕೈವಾಡವಿಲ್ಲ..ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಡಿಸಿಪಿ ಭೀಮಾಶಂಕರ್‌ ಗುಳೇದ್​​​ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ರಾಜ್ಯದಲ್ಲಿ ಶಾಂತಿ ಕದಡುವ ಯತ್ನ’