Select Your Language

Notifications

webdunia
webdunia
webdunia
webdunia

ರಸ್ತೆ ಗುಂಡಿ ತಪ್ಪಿಸಲು ಹೋಗಿ ಪಿಲ್ಲರ್‌ ಡಿಕ್ಕಿ ಹೊಡೆದ ಬಸ್

ksrtc bus metro
bengaluru , ಸೋಮವಾರ, 9 ಮೇ 2022 (15:40 IST)
ಬೆಂಗಳೂರಿನ ಗುಂಡಿಮಯ ರಸ್ತೆಗಳಲ್ಲಿ ಸಂಚರಿಸುವುದೇ ದೊಡ್ಡ ಸಾಹಸವಾಗಿದೆ ಸೋಮವಾರ ಬೆಳ್ಳಂ ಬೆಳ್ಳಗ್ಗೆ ಮೈಸೂರು ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಬಸ್ ಮೆಟ್ರೋ ಪಿಲ್ಲರ್ಗೆ ಡಿಕ್ಕಿ ಹೊಡೆದಿದೆ.
ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿ ಒಟ್ಟು 45 ಜನ ಪ್ರಯಾಣಿಕರಿದ್ದರು. ಗುಂಡಿ ತಪ್ಪಿಸಲು ಹೋಗಿ ಬಸ್ ಮೆಟ್ರೋ ಪಿಲ್ಲರ್ಗೆ ಗುದ್ದಿದ್ದ ರಭಸಕ್ಕೆ ನಾಲ್ವರ ಸ್ಥಿತಿ ಗಂಭೀರಾಗಿದೆ ಮತ್ತು 25 ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಮಾತನಾಡಿರುವ ಚಾಲಕ ಮಂಜುನಾಥ್ ಮೆಟ್ರೋ ಪಿಲ್ಲರ್ 546ರ ಬಳಿ ದೊಡ್ಡ ಗುಂಡಿ ಇತ್ತು ಅದನ್ನು ತಪ್ಪಿಸೋಕೆ ಹೋಗಿ ಪಿಲ್ಲರ್ಗೆ ಗುದ್ದಿದೆ ಬಸ್ಸಿನಲ್ಲಿ ಒಟ್ಟು 45 ಜನ ಪ್ರಯಾಣಿಕರಿದ್ದರು ಎಲ್ಲರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
ಬಸ್ ಮೊದಲು ಗುಂಡಿಗೆ ಇಳಿದ ಪರಿಣಾಮ ನಿಯಂತ್ರಣ ತಪ್ಪಿತ್ತು ನಾನು ಅದನ್ನು ತಪ್ಪಿಸಲು ಹೋಗಿ 4 ಅಡಿಯ ತಡೆಗೋಡೆಗೆ ಗುದ್ದಿ ಆ ನಂತರ ಪಿಲ್ಲರ್ಗೆ ಗುದ್ದಿತ್ತು. ಒಂದು ವೇಳೆ ಮೆಟ್ರೋ ಪಿಲ್ಲರ್ ಇಲ್ಲದಿದ್ದಲ್ಲಿ ರಸ್ತೆಯ ಮತ್ತೊಂದು ಬದಿಗೆ ಹೋಗಿ ದೊಡ್ಡ ಆನಾಹುತವೇ ಸಂಭವಿಸಿರುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಚಾಲಕ ಮಂಜುನಾಥ್ ಹಾಗೂ ನಿರ್ವಾಹಕ ವೆಂಕಟರಮಣಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕ ಪ್ರಯಾಣಿಕರಿಗೆ ಮುಖದ ಭಾಗದಲ್ಲಿ ಗಾಯಗಳಾಗಿದ್ದು ಎಲ್ಲರು ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು  ಚಾಲಕ ಮಂಜುನಾಥ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾಲರ್‌ ಎದುರು ಸಾರ್ವಕಾಲಿಕ ಮಟ್ಟಕ್ಕೆ ಕುಸಿದ ರೂಪಾಯಿ!