Select Your Language

Notifications

webdunia
webdunia
webdunia
webdunia

ತಮಿಳುನಾಡು-ಕರ್ನಾಟಕ ನಡುವೆ ಬಿರುಕು ಮೂಡಿಸಿದೆ : ಅಣ್ಣಾಮಲೈ

ತಮಿಳುನಾಡು-ಕರ್ನಾಟಕ ನಡುವೆ ಬಿರುಕು ಮೂಡಿಸಿದೆ : ಅಣ್ಣಾಮಲೈ
ಕೋಲಾರ , ಸೋಮವಾರ, 9 ಮೇ 2022 (11:58 IST)
ಕೋಲಾರ : ತಮಿಳುನಾಡು ಮತ್ತು ಕರ್ನಾಟಕ ಬಾಂಧವ್ಯ ಚೆನ್ನಾಗಿರಲು ಹಲವು ವಿಚಾರಗಳಿವೆ.

ಆದ್ರೆ ಕಾಂಗ್ರೆಸ್ 2 ರಾಜ್ಯಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕೋಲಾರದಲ್ಲಿ ಹೇಳಿದರು.

ಕೋಲಾರದ ಕೆಜಿಎಫ್ ನಗರದಲ್ಲಿ ಭಾನುವಾರ ಬಿಜೆಪಿ ಸಮಾವೇಶ ಮಾಡುವ ಮೂಲಕ ತಮಿಳು ಮತಗಳನ್ನು ಸೆಳೆಯಲು ಬಿಜೆಪಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೂ ಮುನ್ನ ಅಣ್ಣಾಮಲೈ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಮೇಕೆದಾಟು ವಿಚಾರದಲ್ಲಿ ತಮ್ಮ ಅಭಿಪ್ರಾಯ ಏನು ಎಂಬುದಕ್ಕೆ ಪ್ರತಿಕ್ರಿಯೆ ನೀಡಿದರು. 

ತಮಿಳುನಾಡು ಮತ್ತು ಕರ್ನಾಟಕದ ಬಾಂಧವ್ಯಕ್ಕಾಗಿ ಹಲವು ವಿಚಾರಗಳಿವೆ. ವ್ಯಾಪಾರ, ಕೃಷಿ ಸೇರಿದಂತೆ ಹಲವು ವಿಚಾರಗಳಲ್ಲಿ ಒಬ್ಬರಿಗೊಬ್ಬರು ಚೆನ್ನಾಗಿಯೇ ಇದ್ದೇವೆ.

ತಮಿಳುನಾಡಿನ ಎಷ್ಟೋ ಮಂದಿ ಬೆಂಗಳೂರಿನ ಐಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಬಾಂಧವ್ಯಕ್ಕೆ ಹಲವು ವಿಚಾರಗಳಿದ್ರು, ಕಾಂಗ್ರೆಸ್ ಜನರನ್ನು ಒಡೆಯುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರಕ್ಕೆ ಬಂದ್ರೆ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ : ಸಿದ್ದರಾಮಯ್ಯ