Select Your Language

Notifications

webdunia
webdunia
webdunia
Monday, 7 April 2025
webdunia

ಬಿಜೆಪಿ ಸೇಪರ್ಡೆ ಬಗ್ಗೆ ಸುಮಲತಾ ಹೇಳಿದ್ದೇನು?

ಬಿಜೆಪಿ
ಬೆಂಗಳೂರು , ಶನಿವಾರ, 7 ಮೇ 2022 (14:17 IST)
ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿಗೆ ಮದ್ದೂರಿನಲ್ಲಿ ಏಪ್ರಿಲ್ 28 ರಂದು ಪ್ರತಿಕ್ರಿಯಿಸಿದ್ದ ಅವರು,

ಬಿಜೆಪಿ ಮುಖಂಡರನ್ನು ಭೇಟಿಯಾದರೆ ಅಭಿವೃದ್ಧಿಯ ವಿಚಾರವಾಗಿ ಅಷ್ಟೇ. ಅವರ ಜೊತೆ ಅಭಿವೃದ್ಧಿ ವಿಚಾರವನ್ನಷ್ಟೇ ಮಾತನಾಡಿದ್ದೇನೆ ಎಂದು ತಿಳಿಸಿದ್ದರು.

ಸಚಿವ ಅಶ್ವತ್ಥ್ ನಾರಾಯಣ್ ಪಕ್ಷಕ್ಕೆ ಬಂದರೆ ಸ್ವಾಗತ ಎಂದಿದ್ದಾರೆ. ನನಗೆ ಈಗ ಸದ್ಯಕ್ಕೆ ಅವಶ್ಯಕತೆ ಇಲ್ಲ. ಈಗ ಚುನಾವಣೆಯೂ ಇಲ್ಲ ಅದರ ಪ್ರಸ್ತಾಪ ಇಲ್ಲ. ಪಕ್ಷ ಸೇರ್ಪಡೆ ವಿಚಾರವಾಗಿ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಜನರು ಏನು ಹೇಳಿದ್ದಾರೋ ಅದನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದಿದ್ದರು.

ಬೆಂಬಲಿಗರು ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ನನ್ನ ಬೆಂಬಲಿಗರು ಬಿಜೆಪಿ ಸೇರ್ಪಡೆ ಬಗ್ಗೆ ನಾನು ಏನು ಹೇಳುವುದಿಲ್ಲ. ಎಲ್ಲರೂ ಸ್ವತಂತ್ರರು ಯಾವ ಪಕ್ಷಕ್ಕಾದರೂ ಸೇರಬಹುದು. ನನ್ನ ಚುನಾವಣೆ ವೇಳೆ ಎಲ್ಲಾ ಪಕ್ಷದವರು ದುಡಿದಿದ್ದಾರೆ ಎಂದರು.

ಪುತ್ರ ಅಭಿಷೇಕ್ ಚುನಾವಣೆ ಸ್ಪರ್ಧಿಸುತ್ತಾನೋ ಇಲ್ಲವೋ ಎನ್ನುವುದು ಆತನಿಗೆ ಬಿಟ್ಟ ವಿಚಾರ. ಸಿನಿಮಾಗೆ ಬಾ ಎಂದು ನಾವು ಹೇಳಿಲ್ಲ. ರಾಜಕೀಯ ಬಗ್ಗೆನೂ ನಾವು ಹೇಳಲ್ಲ. ಇದು ಆತನ ವೈಯಕ್ತಿಕ ವಿಚಾರ ಎಂದು ಪ್ರತಿಕ್ರಿಯಿಸಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಅಭಿಷೇಕ್ ರಾಜಕೀಯ ಪ್ರವೇಶಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್!