ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಾ ಬಂದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಬಿಜೆಪಿ ಹೈಕಮಾಂಡ್ ವಿರುದ್ಧವೇ ದೊಡ್ಡ ಬಾಂಬ್ ಹಾಕಿದ್ದಾರೆ.
ವಿಜಯಪುರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ನನ್ನ ಬಳಿ ಬಂದು 2500 ಕೋಟಿ ರೂ. ಕೊಟ್ಟರೆ ಸಿಎಂ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಅದಕ್ಕೆ ನಾನು ಒಪ್ಪಲಿಲ್ಲ ಎಂದು ಹೇಳಿದ್ದಾರೆ.
೨೫೦೦ ಕೋಟಿ ಕೊಡಬೇಕಂತೆ? ಹೇಗೆ ಕೊಡಲಿ ನಾನು ಅಷ್ಟೊಂದು ದುಡ್ಡು? ಗೋದಾಮಿನಲ್ಲಿ ಇಡಬೇಕಾ ಅಥವಾ ಎಲ್ಲಿ ಇಡಬೇಕು ಅಂತ ಅವರಲ್ಲಿ ಪ್ರಶ್ನಿಸಿದೆ ಎಂದು ಅವರು ಹೇಳಿದರು.
ನಾನು ವಾಜಪೇಯಿ ಕಾಲದಲ್ಲಿ ಕೇಂದ್ರ ಸಚಿವ ಆಗಿದ್ದವನು. ನಾನು ಹಣ ಕೊಟ್ಟು ಅಥವಾ ಶಿಫಾರಸು ಮಾಡಿ ಸಿಎಂ ಆಗಬೇಕಾಗಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೈಕಮಾಂಡ್ ವಿರುದ್ಧ ಗುಡುಗಿದರು.