Publish Date: Mon, 09 May 2022 (19:37 IST)
Updated Date: Mon, 09 May 2022 (19:39 IST)
ರಾಜ್ಯದಲ್ಲಿ ಆಜಾನ್ ವರ್ಸಸ್ ಸುಪ್ರಭಾತ ಅಭಿಯಾನ ವಿಚಾರ ಕುರಿತು ಪ್ರಮೋದ್ ಮುತಾಲಿಕ್‌ನನ್ನ ಒದ್ದು ಒಳಗಡೆ ಹಾಕಬೇಕು ಎಂದು ಬಾಗಲಕೋಟೆಯ ಬದಾಮಿಯಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ..ಇದು ಶ್ರೀ ರಾಮಸೇನೆಯೋ..? ಅಥವಾ ರಾವಣ ಸೇನೆಯೋ..? ಅಂತ ನನಗೆ ಗೊತ್ತಾಗ್ತಿಲ್ಲ.ನಾನು ಬೆಳಗ್ಗೆಯಿಂದ ಎಲ್ಲವನ್ನೂ ನೋಡಿದ್ದೇನೆ. ಸಮಾಜದ ಸಾಮರಸ್ಯ ಹಾಳಾದ ಮೇಲೆ ರಿಪೇರಿ ಮಾಡೋಕೆ ಆಗಲ್ಲ..ಇದು ಬೃಹದಾಕಾರವಾಗಿ ಬೆಳೆಯಲು ಸಕಾ೯ರ ಮೌನವಾಗಿ ಒಪ್ಪಿಗೆ ಸೂಚಿಸೋದು ನಿಲ್ಲಿಸಬೇಕು..ಇಲ್ಲಾಂದ್ರೆ ಸರ್ವಜನಾಂಗದ ಶಾಂತಿಯ ತೋಟ ನೆಲೆಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಕಿಡಿಕಾರಿದ್ರು.