Select Your Language

Notifications

webdunia
webdunia
webdunia
webdunia

ಮೇ 9ರಿಂದ ಮೈಕ್‌ ನಲ್ಲಿ ಮಹಾ ಆರತಿ ಅಭಿಯಾನ: ಪ್ರಮೋದ್‌ ಮುತಾಲಿಕ್

ಮೇ 9ರಿಂದ ಮೈಕ್‌ ನಲ್ಲಿ ಮಹಾ ಆರತಿ ಅಭಿಯಾನ: ಪ್ರಮೋದ್‌ ಮುತಾಲಿಕ್
bengaluru , ಬುಧವಾರ, 20 ಏಪ್ರಿಲ್ 2022 (14:35 IST)
ಮೇ 9ರೊಳಗೆ ಮಸೀದಿಗಳಲ್ಲಿನ ಮೈಕ್‌ ಗಳನ್ನು ತೆರವುಗೊಳಿಸದೇ ಇದ್ದರೆ ರಾಜ್ಯಾದ್ಯಂತ ಮಹಾ ಆರತಿ ಅಭಿಯಾನ ಆರಂಭಿಸುವುದಾಗಿ ಶ್ರೀರಾಮ ಸೇನೆ ಎಚ್ಚರಿಸಿದೆ.

ಬೆಂಗಳೂರಿನಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಈ ವಿಷಯ ತಿಳಿಸಿದ್ದು, ಸರಕಾರ ಮಸೀದಿಗಳಲ್ಲಿ ಹಾಕಿರುವ ಮೈಕ್‌ ಗಳನ್ನು ತೆರವುಗೊಳಿಸುವ ಬಗ್ಗೆ ನೋಟಿಸ್‌ ನೀಡಿದ್ದೇವೆ ಎಂದು ನಾಟಕ ಮಾಡುತ್ತಿವೆ. ಮೇ ‌9ರೊಳಗೆ ಮೈಕ್‌ ತೆರವುಗೊಳಿಸದೇ ಇದ್ದರೆ ದೇವಸ್ಥಾನ ಮತ್ತು ಮಠಗಳಲ್ಲಿ ಮಹಾಆರತಿ ಕಾರ್ಯಕ್ರಮ ಆಯೋಜಿಸಲಿದ್ದೇವೆ ಎಂದರು.

ಮುಸ್ಲಿಮರ ರಂಜಾನ್‌ ಹಬ್ಬದ ದಿನವೇ ಅಕ್ಷಯ ತೃತೀಯ ಆಗಮಿಸಿದ್ದು, ಅಂದಿನಿಂದ ರಾಜ್ಯದ ಎಲ್ಲಾ ಮಂದಿರ, ಮಠಗಳು, ಮಹಾ ಆರತಿ ಪ್ರಯುಕ್ತ ಆಜಾದ್‌ ಮೊಳಗುವ ೫ ಸಮಯದಲ್ಲೂ ಹನುಮಾನ್‌ ಚಾಲಿಸ್‌ ಪಠಣ ಮಾಡಲಾಗುವುದು ಎಂದು ಅವರು ಹೇಳಿದರು.

ಈಗಾಗಲೇ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 11ರವರೆಗೂ ಆಜಾನ್‌ ಸಮಯದಲ್ಲಿ ಹನುಮಾನ್‌ ಚಾಲಿಸ್‌ ಪಠಣ ಮಾಡಲು ನೂರಕ್ಕೂ ಹೆಚ್ಚು ದೇವಸ್ಥಾನ, 50ಕ್ಕೂ ಹೆಚ್ಚು ಮಠಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಮುತಾಲಿಕ್‌ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಜಗತ್ತಿನಲ್ಲಿ ಸಾಂಪ್ರದಾಯಿಕ ಔಷಧ ಯುಗ ಶುರು : ಮೋದಿ